ಕೆಜಿಎಫ್ 2ಗೆ ಕಾದಿರುವ ಅಭಿಮಾನಿಗಳಿಗೆ ಕಾದಿದೆ ಭರ್ಜರಿ ಗಿಫ್ಟ್

ಬೆಂಗಳೂರು, ಜುಲೈ 29, 2020 (www.justkannada.in): ಇಂದು ಕೆಜಿಎಫ್ 2 ಚಿತ್ರದ ಖಳನಾಯಕ ಸಂಜಯ್ ದತ್ ಸ್ಪೆಷಲ್ ಲುಕ್ ಬಿಡುಗಡೆಯಾಗಲಿದೆ.

ಕಳೆದ ವರ್ಷ ಸಂಜಯ್ ದತ್ ಅವರ ಜನುಮದಿನಕ್ಕೆ ‘ಅಧೀರ’ ಲುಕ್ ಬಿಡುಗಡೆ ಮಾಡಲಾಗಿತ್ತು. ನಾಳೆ ಸಂಜಯ್ ದತ್ 60ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಈ ವಿಶೇಷ ಲುಕ್ ಬಿಡುಗಡೆಯಾಗಲಿದೆ.

ಚಿತ್ರದ ಇನ್ನೊಂದಿಷ್ಟು ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಎಲ್ಲವೂ ಸರಿಯಾಗಿದ್ದಲ್ಲಿ ಅಕ್ಟೋಬರ್ 23ರಂದು ಚಿತ್ರ ಬಿಡುಗಡೆ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಯೋಜಿಸಿದ್ದರು.

ನಿರ್ಮಾಪಕ ವಿಜಯ್ ಕಿರಗುಂದೂರ್, ಟೀಸರ್ ಬಿಡುಗಡೆಯಾಲಿದೆಯೋ ಅಥವಾ ಪೋಸ್ಟರ್ ಅನಾವರಣಗೊಳ್ಳಲಿದೆಯೋ ಅನ್ನುವುದನ್ನು ಗೌಪ್ಯವಾಗಿ ಇಟ್ಟಿದ್ದಾರೆ.