ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋ ಮಾರಾಟ ಮಾಡುತ್ತಿದ್ದವ ಸಿಐಡಿ ವಶಕ್ಕೆ.

 

ಬೆಂಗಳೂರು, ಜು.28, 2020 : (www.justkannada.in news ) ಆನ್‌ಲೈನ್‌ನಲ್ಲಿ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋಗಳನ್ನ ಮಾರಾಟ ಮಾಡುತ್ತಿದ್ದವನನ್ನು ಸಿ.ಐ.ಡಿ.ಯ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಮೂಲದ ಸೌರವ್ ಶೆಟ್ಟಿ (21) ಬಂಧಿತ ಆರೋಪಿ.

‘ Instagram ‘ ಮೂಲಕ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವಿಡಿಯೋ ಗಳಿರುವ ಲಿಂಕ್ಗಳು ಆರೋಪಿ ಗ್ರಾಹಕರೊಂದಿಗೆ ಶೇರ್ ಮಾಡುತ್ತಿದ್ದ. ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ (NCRB) ಮಾಹಿತಿ ಆಧರಿಸಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಾಗಿತ್ತು.
ಬಂಧಿತ ಆರೋಪಿಯ ತನಿಖೆ ವೇಳೆ ಆತನ ಆನ್‌ಲೈನ್ ಸ್ಟೋರೇಜ್‌ನಲ್ಲೂ ಇಂಥದ್ದೆ ಸಾಕಷ್ಟು ವಿಡಿಯೋಗಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

Bangalore-CID-police-arrested-pornography-person-udupi

ಜತೆಗೆ ಆರೋಪಿ, ಡಿಜಿಟಲ್ ಉಪಕರಣಗಳು ಹಾಗೂ ಕ್ಲಬ್ ಡಾಟಾ ಖಾತೆ ಸಹ ಜಪ್ತಿ ಮಾಡಲಾಗಿದೆ. ಈ ಹಗರಣದಲ್ಲಿ ಅನ್ಯ ರಾಜ್ಯಗಳ ಇತರೆ ಆರೋಪಿಗಳು ಸಹ ಶಾಮೀಲಾಗಿದ್ದು, ನೋಡಲ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲಿಲ ದೃಶ್ಯಾವಳಿಗಳ ಹುಡುಕಾಟ, ವೀಕ್ಷಣೆ, ಡೌನ್‍ಲೋಡ್, ಸಂಗ್ರಹಣೆ, ಹಂಚಿಕೆ, ಮಾರಾಟ ಇವುಗಳು ಮಾಹಿತಿ ತಂತ್ರಾಜ್ಞಾನ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಅನ್ವಯ ಗುರುತರ ಅಪರಾಧ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಮತ್ತು ಅವರ ತಂಡದವರು ಪ್ರಕರಣ ದಾಖಲಾದ ಒಂದು ವಾರದೊಳಗೆ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಬಂಧಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bangalore-CID-police-arrested-pornography-person-udupi

ಸಿಐಡಿ ಘಟಕದ ಮೇಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖಾಧಿಕಾರಿ ಡಿ.ಎಸ್.ಪಿ. ಯಶವಂತ್‍ಕುಮಾರ್ ಮತ್ತು ಸಿಬ್ಬಂದಿ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ooooo

key words : Bangalore-CID-police-arrested-pornography-person-udupi