ಮೈಸೂರಿನಲ್ಲಿ ರಿಯಲ್ ಎಸ್ಟೇಟ್  ಉದ್ಯಮಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಅಪ್ರಾಪ್ತ ಮಗನಿಂದಲೇ ಕೃತ್ಯ.

Promotion

ಮೈಸೂರು,ಆಗಸ್ಟ್,9,2022(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ನಡೆದಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಸಂಪತ್ ಕುಮಾರ್ ಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅವರ ಅಪ್ರಾಪ್ತ ವಯಸ್ಸಿನ ಮಗನೇ ಹತ್ಯೆ ಮಾಡಿದ್ದಾನೆಂಬುದು ಪೊಲೀಸರಿಂದ ಮಾಹಿತಿ ತಿಳಿದು ಬಂದಿದೆ.

ಮನೆಯಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸಂಪತ್ ಕುಮಾರ್ ಅವರ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದ ಘಟನೆ ನಡೆದಿತ್ತು. ಆದರೆ ಅವರ ಅಪ್ರಾಪ್ತ ವಯಸ್ಸಿನ ಪುತ್ರನೇ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾತನಾಡಿ ಮಾಹಿತಿ ನೀಡಿರುವ  ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು, ತಾಯಿಗೆ ತಂದೆ ಸಂಪತ್ ಕುಮಾರ್  ಕಿರುಕುಳ ನೀಡುತ್ತಿದ್ದರು ಎಂಬುದು ಅಪ್ರಾಪ್ತ ಪುತ್ರನ ಮನಸ್ಸಿನಲ್ಲಿತ್ತು. ಈ ಕಾರಣಕ್ಕಾಗಿ ತಂದೆಯನ್ನ ಕೊಲೆ ಮಾಡಬೇಕೆಂದು ಸುಮಾರು ದಿನಗಳಿಂದ ಪುತ್ರ ಪ್ಲಾನ್ ಮಾಡಿದ್ಧನು. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ  ಎಂದು ತಿಳಿಸಿದ್ದಾರೆ.

Key words:  twist – murder -case – estate -businessman – Mysore.