ಈ ಶುಕ್ರವಾರ ಬರೋಬ್ಬರಿ 9 ಸಿನಿಮಾಗಳು ತೆರೆಗೆ !

ಬೆಂಗಳೂರು, ನವೆಂಬರ್ 2, 2019 (www.justkannada.in): ಈ ಶುಕ್ರವಾರ ಬರೋಬ್ಬರಿ 9 ಸಿನಿಮಾಗಳು ತೆರೆಗೆ ಬರುತ್ತಿವೆ.

ನಾಲ್ಕೈದು ಸಿನಿಮಾಗಳು ತೆರೆಗೆ ಒಟ್ಟಿಗೆ ಬರ್ತಿವೆ ಅಂದರೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತೆ. ಆದರೀಗ 9 ಸಿನಿಮಾಗಳು ತೆರೆಗೆ ಬರುತ್ತಿವೆ. ಬಹುತೇಕ ಸಿನಿಮಾಗಳು ಹೊಸಬರದ್ದೆ. ಈ ವಾರದ ಚಿತ್ರಗಳಲ್ಲಿ ಹಾರರ್, ಥ್ರಿಲ್ಲರ್, ಲವ್ ಸ್ಟೋರಿ ಹೇಳುವ ಸಿನಿಮಾಗಳು.

ಮುಂದಿನ ನಿಲ್ದಾಣ, ದಮಯಂತಿ, ಬ್ರಹ್ಮಾಚಾರಿ ನಿರೀಕ್ಷೆಯ ಚಿತ್ರಗಳು ಸೇರಿದಂತೆ ನಾನೆ ರಾಜ, ತುಂಡ್ ಹೈಕ್ಳ ಸಾವಾಸ, ರಣಹೇಡಿ, ಮಾರ್ಗರೇಟ್, ಕಿರು ಮಿನ್ಕಣಜ, ರಿವೀಲ್-ಅಬ್ಬಾ ಚಿತ್ರಗಳು ತೆರೆಗೆ ಬರುತ್ತಿವೆ.