Thursday, August 20, 2026

BDA Apartments

Home Front Page ನಾಲ್ವರು ದರೋಡೆಕೋರರು ಅಂದರ್: ನಗದು, ಮೊಬೈಲ್, ದ್ವಿಚಕ್ರ ವಾಹನ ಪೊಲೀಸರ ವಶಕ್ಕೆ 

ನಾಲ್ವರು ದರೋಡೆಕೋರರು ಅಂದರ್: ನಗದು, ಮೊಬೈಲ್, ದ್ವಿಚಕ್ರ ವಾಹನ ಪೊಲೀಸರ ವಶಕ್ಕೆ 

ಮೈಸೂರು,ಮಾರ್ಚ್,11,2021 (www.justkannada.in) : ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ 4 ಜನ ದರೋಡೆಕೋರರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ.

jkಮಾರ್ಚ್ 4ರ ರಾತ್ರಿ 10.30ರಂದು ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಆತನ ಬಳಿಯಿದ್ದ 28 ಸಾವಿರ ನಗದು, 25 ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಕಸಿದು ಪರಾರಿಯಾಗಿದ್ದರು.

ಮೇಟಗಳ್ಳಿ ಠಾಣೆ ಇನ್ಸ್‌ಪೆಕ್ಟರ್ ಎ.ಮಲ್ಲೇಶ್ ನೇತೃತ್ವದಲ್ಲಿ ವಿಷ್ಣು ಅಲಿಯಾಸ್ ಲೂಸ್ (19), ಗಿರೀಶ ಅಲಿಯಾಸ್ ನೆಟ್ಟು (19), ಅಜಿತ್ ಕುಮಾರ್ ಅಲಿಯಾಸ್ ತೋಟ (19), ಯಶವಂತ ಅಲಿಯಾಸ್ ಬಿನ್ನಿ (22) ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 14 ಸಾವಿರ ರೂ. ನಗದು, 1 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

4 people-gangsters-Arrest-14 thousand-Cash-2 bikes-Vehicle-demesne

ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

key words : 4 people-gangsters-Arrest-14 thousand-Cash-2 bikes-Vehicle-demesne