ಮೈಸೂರು ಜೆಡಿಎಸ್ ನಲ್ಲಿ ಭುಗಿಲೆದ್ದ ಭಿನ್ನಮತ:  ಹೆಚ್.ಡಿಕೆ ಮತ್ತು ಹೆಚ್.ಡಿ ರೇವಣ್ಣ ಸಮ್ಮುಖದಲ್ಲೇ ಶಾಸಕರ ಜಟಾಪಟಿ…

ಮೈಸೂರು,ಮಾರ್ಚ್,11,2021(www.justkannada.in): ಮೈಸೂರು ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೈಸೂರು ಮೈಮುಲ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣ ಅವರ ಸಮ್ಮುಖದಲ್ಲೇ ಶಾಸಕರಿಬ್ಬರು ಜಟಾಪಟಿ ನಡೆಸಿರುವ ಘಟನೆ ನಡೆದಿದೆ.jk

ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವು ಹಾಗೂ ಕೆ.ಆರ್ ನಗರ ಜೆಡಿಎಸ್ ಶಾಸಕ ಸಾ. ರಾ ಮಹೇಶ್ ನಡುವಿನ ಅಸಮಾಧಾನ ಸ್ಪೋಟಗೊಂಡಿದ್ದು ಮೈಸೂರು ಮೈಮುಲ್ ಚುನಾವಣೆ ವಿಚಾರದಲ್ಲಿ  ಇಬ್ಬರು ಶಾಸಕರು ಜಟಾಪಟಿ ನಡೆಸಿದ್ದಾರೆ.

ಮಾರ್ಚ್ 16 ರಂದು ಮೈಮುಲ್ ನಿರ್ದೇಶಕರ ಚುನಾವಣೆ ನಡೆಯಲಿದ್ದು,ಇದು ಜಿಟಿ ದೇವೇಗೌಡರು ಹಾಗೂ ಜೆಡಿಎಸ್ ನಾಯಕರಿಗೆ ಪ್ರತಿಷ್ಟೆಯ ಕಣವಾಗಿದೆ. ಹೀಗಾಗಿ ಮೈಮುಲ್ ಚುನಾವಣೆಗಾಗಿ ಹೆಚ್.ಡಿ ರೇವಣ್ಣ ಮತ್ತು ಹೆಚ್.ಡಿ ಕುಮಾರಸ್ವಾಮಿ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.

ಈ ಮಧ್ಯೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರಾತ್ರಿ ನಡೆದ ಸಭೆಯಲ್ಲಿ  ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣ ಅವರ ಸಮ್ಮುಖದಲ್ಲೇ ಇಬ್ಬರು ಶಾಸಕರು ಮಾತಿನ ಚಕಮಕಿ ನಡೆಸಿದ್ದಾರೆ.

ಶಾಸಕ ಮಹದೇವು ಪುತ್ರನ ವಿರುದ್ದವೇ ಸಾರಾ ಮಹೇಶ್ ಅಭ್ಯರ್ಥಿಗಳನ್ನು ಹಾಕಿದ್ದು, ಜತೆಗೆ ಕಾಂಗ್ರೆಸ್ ಮಾಜಿ ಶಾಸಕರ ಜೊತೆ ಮಾಡಿಕೊಂಡ ಹೊಂದಾಣಿಕೆಗೆ ಶಾಸಕ ಕೆ.ಮಹದೇವು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಜಟಾಪಟಿ ನಡೆದ ನಂತರ ಶಾಸಕ ಕೆ.ಮಹದೇವು ಸಭೆಯಿಂದ ಹೊರನಡೆದರು.

ಕೃಪೆ-internet

ಈ ನಡುವೆ  ಕೆ.ಆರ್.ನಗರದಲ್ಲಿ ಬೆಂಬಲಿಗನಿಗೆ ಕೈ ಕೊಟ್ಟು, ಹೆಚ್.ಡಿ ರೇವಣ್ಣ ಅವರ ಭಾಮೈದುನನಿಗೆ ಮನ್ನಣೆ ಹಾಕಿದ ಹಿನ್ನೆಲೆಯಲ್ಲಿ ಸಾರಾ ಮಹೇಶ್ ನಡೆಗೆ ಬೇಸತ್ತು ಮಾಜಿ ನಿರ್ದೇಶಕ ಎ.ಟಿ.ಸೋಮಶೇಖರ್ ಜಿಟಿಡಿ ಗುಂಪಿಗೆ ತೆರಳಿದ್ದಾರೆ.

ENGLISH SUMMARY…..

Dissent in JDS at Mysuru: MLAs quarrel in front of party leaders HDK and H.D. Revanna
Mysuru, Mar. 11, 2021 (www.justkannada.in): Dissent exploded in the Mysuru JDS party, with two MLAs of the party starting a quarrel in front of party leaders H.D. Kumaraswamy and H.D. Revanna.
The dissent between Periyapatna JDS MLA K. Mahadevu and K.R. Nagara JDS MLA Sa. Ra. Mahesh came to the fore during a discussion held in Mysuru today, concerning the MYMUL elections to be held at Mysuru on March 16. The MYMUL election is prestige for party leader G.T. Devegowda and other JDS leaders of the region. The incident took place during a meeting held in a private hotel in Mysuru in which H.D. Kumaraswamy and H.D. Revanna had participated.
MLA Mahadevu expressed his disappointment against Sa. Ra. Mahesh for fielding candidates against his son and the understanding made with former Congress MLA. K. Mahadevu walked out of the meeting after the incident took place.

mymul-election-mysore-jds-mlas-hd-kumaraswamy-hd-revanna
ಕೃಪೆ-internet

Former Director A.T. Somashekar has joined party leader G.T. Devegowda’s faction after the party neglected one of his supporters and gave prominence to H.D. Revanna’s brother-in-law.
Keywords: JDS/ Dissent in Mysuru/ K. Mahadevu/ Sa. Ra. Mahesh/ H.D. Kumaraswamy/ H.D. Revanna/ quarrel

Key words: MYMUL-election- Mysore- JDS- MLAs – HD Kumaraswamy- HD Revanna.