ಇಂದು ಐಪಿಎಲ್ 2021ರ ಹರಾಜು ಪ್ರಕ್ರಿಯೆ…

ಚೆನ್ನೈ,ಫೆಬ್ರವರಿ,18,2021(www.justkannada.in):   ಚುಟುಕು ಕ್ರಿಕೆಟ್‌ ಐಪಿಎಲ್‌ ನ 14 ನೇ ಅವೃತ್ತಿ ಪಂದ್ಯಾವಳಿಗಾಗಿ  ನಾಳೆ(ಫೆಬ್ರವರಿ 18)  ಹರಾಜು ಪ್ರಕ್ರಿಯೆ ನಡೆಯಲಿದ್ದು, ಒಟ್ಟು 292 ಆಟಗಾರರ ಹೆಸರು ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೈಕಿ  164 ಭಾರತ, 125 ವಿದೇಶಿ ಆಟಗಾರರು ಹಾಗೂ 3 ಮಂದಿ ಸಹ ರಾಷ್ಟ್ರಗಳ ಆಟಗಾರರಿದ್ದಾರೆ.

ಚೆನ್ನೈನಲ್ಲಿ   ಇಂದು ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಂಟು ತಂಡಗಳ ಮಾಲೀಕರು ತಮಗೆ ಬೇಕಾದ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲಿದ್ದಾರೆ.Today is the auction process for IPL 2021.

ಸಿಸಿಐ ನಿಯಮಗಳ ಪ್ರಕಾರ, ಫ್ರ್ಯಾಂಚೈಸ್ ಮಾಲೀಕರು ಹರಾಜಿನ ಭಾಗವಾಗಿರಲು ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕಾಗುತ್ತದೆ.ಐಪಿಎಲ್ 2021 ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನಲ್ಲಿ ನೋಡಬಹುದು.