ಇದು ಎಕ್ಸಿಟ್ ಪೋಲ್ ಮಾತ್ರ: ಎಕ್ಸಾಕ್ಟ್ ಪೋಲ್ ಅಲ್ಲ- ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

ಬೆಂಗಳೂರು,ಮೇ,20,2019(www.justkannada.in): ಮತದಾನೋತ್ತರ ಸಮೀಕ್ಷೆಯಲ್ಲಿ ಎನ್ ಡಿಎಗೆ ಮುನ್ನಡೆ ಬಂದ ಹಿನ್ನೆಲೆ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಇದು ಎಕ್ಸಿಟ್ ಪೋಲ್ ಮಾತ್ರ: ಎಕ್ಸಾಕ್ಟ್ ಪೋಲ್ ಅಲ್ಲ ಎಂದು ತಿಳಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಮೀಕ್ಷೆಗಳ ಮೂಲಕ ಕೃತಕ ಮೋದಿ ಅಲೆ ಸೃಷ್ಠಿಸಲು ಬಿಜೆಪಿ ಮುಂದಾಗಿದೆ. ಅತಂತ್ರ ಲೋಕಸಭೆ ನಿರ್ಮಾಣವಾದಾಗ ಪ್ರಾದೇಶಿಕ ಪಕ್ಷಗಳನ್ನ ಸೆಳೆಯಲು  ಬಿಜೆಪಿ ಯತ್ನಿಸುತ್ತಿದೆ. ಕೇಂದ್ರದಲ್ಲಿ ಸರ್ಕಾರ ರಚಿಸಲು ಎದುರಾಗಬಹುದಾದ ಸ್ಥಾನಗಳ ಕೊರತೆಗಳನ್ನು ಸಣ್ಣ ಪುಟ್ಟ ಪಕ್ಷಗಳನ್ನು ಸೆಳೆಯುವ ಮೂಲಕ ತುಂಬಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಮೀಕ್ಷೆಗಳೆಂಬ ತಂತ್ರ ಹೆಣೆದಿದ್ದಾರೆ ಎಂದು  ಆರೋಪಿಸಿದ್ದಾರೆ.

ಹಾಗೆಯೇ ಇನ್ನೊಂದು ಟ್ವಟ್ ನಲ್ಲಿ ಎವಿಎಂ ಬಗ್ಗೆ ಆಕ್ಷೇಪ್ರ ವ್ಯಕ್ತಪಡಿಸಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನರೇಂದ್ರ ಮೋದಿ ಆಡಳಿತದಲ್ಲಿ ಮತಯಂತ್ರಗಳ ಅಕ್ರಮದ ಬಗ್ಗೆ ಬಹುತೇಕ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿರುವ ವಿಪಕ್ಷಗಳು, ಚುನಾವಣೆ ಆಕ್ರಮ ತಡೆಯುವ ಸಲುವಾಗಿ ಸಾಂಪ್ರದಾಯಿಕ ಮತಪತ್ರಗಳನ್ನೇ ಜಾರಿಗೆ ತರುವಂತೆ ಮನವಿ ಮಾಡಿವೆ ಎಂದಿದ್ದಾರೆ.

Key words: This is only an exit poll Not an Exact Poll-cm hd kumaraswamy

#election #politicalnews #cmhdkumaraswamy