Friday, September 18, 2026

BDA Apartments

ವನ್ಯಜೀವಿ ಪ್ರಿಯರಿಗೆ ಸಿಹಿ ಸುದ್ದಿ; ನಾಳೆಯಿಂದ ಬಂಡೀಪುರ ಸಫಾರಿ ಫುನರಾರಂಭ BDA...
Home Front Page ವನ್ಯಜೀವಿ ಪ್ರಿಯರಿಗೆ ಸಿಹಿ ಸುದ್ದಿ; ನಾಳೆಯಿಂದ ಬಂಡೀಪುರ ಸಫಾರಿ ಫುನರಾರಂಭ.

ವನ್ಯಜೀವಿ ಪ್ರಿಯರಿಗೆ ಸಿಹಿ ಸುದ್ದಿ; ನಾಳೆಯಿಂದ ಬಂಡೀಪುರ ಸಫಾರಿ ಫುನರಾರಂಭ.

ಚಾಮರಾಜನಗರ,ಜೂನ್,29,2021(www.justkannada.in): ವನ್ಯಜೀವಿ ಪ್ರಿಯರಿಗೊಂದು ಸಿಹಿ ಸುದ್ದಿ. ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಬಂಡೀಪುರ ಸಫಾರಿ ನಾಳೆಯಿಂದ ಫುನರಾರಂಭಗೊಳ್ಳಲಿದೆ.

ಬಂಡೀಪುರ ಹುಲಿಯೋಜನೆ ವ್ಯಾಪ್ತಿಯ ಪ್ರವಾಸೋದ್ಯಮ ಚಟುವಟಿಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಬಂಡೀಪುರ ಸಫಾರಿ ಆರಂಭವಾಗಲಿದೆ. ಈ ಕುರಿತು ಮಾಹಿತಿ ನೀಡಿರುವ ಬಂಡೀಪುರ ಹುಲಿಯೋಜನೆ ನಿರ್ದೇಶಕ ಎಸ್.ಆರ್.ನಟೇಶ್, ಸ್ಥಳದಲ್ಲೇ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಜುಲೈ 5ರಿಂದ ಆನ್ಲೈನ್ ಬುಕ್ಕಿಂಗ್ ಸೇವೆ ಲಭ್ಯವಿರಲಿದೆ. ಕೊರೊನಾ ಮುಂಜಾಗ್ರತಾ ಕ್ರಮಗಳ ಮೂಲಕ ಸಫಾರಿ ಪುನರಾರಂಭ ಮಾಡಲಾಗುತ್ತದೆ. ಪ್ರವಾಸಿಗರು ಹಾಗೂ ವನ್ಯಪ್ರಿಯರು ಕೊರೋನಾ ಮಾರ್ಗಸೂಚಿ ಅನುಸರಿಸುವಂತೆ ಮನವಿ ಮಾಡಿದರು.

ಕೊರೊನಾ ಹೆಚ್ಚಳ ಹಿನ್ನಲೆ ಎಲ್ಲಾ ರೀತಿಯ ಚಟುವಟಿಕೆಗಳು ಬಂದ್ ಆಗಿದ್ದವು. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾದ ಹಿನ್ನಲೆ, ಮತ್ತೆ ಪ್ರವಾಸೋದ್ಯಮ ಚಟುವಟಿಕೆಗಳ ಪುನರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

Key words: Sweet news – wildlife lovers-Bandipur Safari –start- tomorrow.