2020ರ ಪ್ರತಿಷ್ಠಿತ ಡಾ. ಜಿಎಸ್ಸೆಸ್  ಪ್ರಶಸ್ತಿಗೆ ಡಾ. ಕರೀಗೌಡ ಬೀಚನಹಳ್ಳಿ ಅವರು ಆಯ್ಕೆ…..

ಬೆಂಗಳೂರು,ಜ,8,2020(www.justkannada.in):  ರಾಷ್ಟ್ರಕವಿ ಡಾ. ಜಿ.ಎಸ್ ಶಿವರುದ್ರಪ್ಪ ವಿಶ್ವಸ್ತ ಮಂಡಲಿ ನೀಡುವ 2020ರ ಪ್ರತಿಷ್ಠಿತ ಡಾ. ಜಿಎಸ್ಸೆಸ್  ಪ್ರಶಸ್ತಿಗೆ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರು ಆಯ್ಕೆಯಾಗಿದ್ದಾರೆ.

ಇದೇ ಜನವರಿ 6 ರಂದು ಜಿ.ಎಸ್ ಶಿವರುದ್ರಪ್ಪ ವಿಶ್ವಸ್ತ ಮಂಡಲಿ ಅಧ್ಯಕ್ಷ ಎಚ್.ಎಸ್ ವೆಂಕಟೇಶ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಗೆ ಕರೀಗೌಡ ಬೀಚನಹಳ್ಳಿ ಅವರನ್ನ ಆಯ್ಕೆ ಮಾಡಲಾಯಿತು. 21-2-2020 ರಂದು ನಡೆಯುವ ಸಮಾರಂಭದಲ್ಲಿ ಡಾ. ಜಿಎಸ್ಸೆಸ್  ಪ್ರಶಸ್ತಿಗೆ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಜಿ.ಎಸ್ ಶಿವರುದ್ರಪ್ಪ ವಿಶ್ವಸ್ತ ಮಂಡಲಿ ಕಾರ್ಯದರ್ಶಿ ವಿಮರ್ಶಕರಾದ ಎಚ್. ದಂಡಪ್ಪ ತಿಳಿಸಿದರು.

ಡಾ. ಕರೀಗೌಡ ಬೀಚನಹಳ್ಳಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದು ಹದಿನಾರು ವಿಮರ್ಶಾ ಸಂಕಲನಗಳನ್ನ ಪ್ರಕಟಿಸಿದ್ದಾರೆ. ಇದರ ಜತೆಗೆ ಇವರು ಪ್ರಸಿದ್ಧ ಕಥೆಗಾರರೂ ಹೌದು. ವ್ಯಷ್ಟಿ ಸಮಷ್ಟಿ, ವಿಸ್ತಾರ, ಕನ್ನಡ ಸಾಹಿತ್ಯ ಸಂಸ್ಕೃತಿ ಕಥನ, ಕನ್ನಡದಲ್ಲಿ ಷೇಕ್ಸಪಿಯರ್  ಕಥಾನಕ, ಬಸವಣ್ಣ ಪುನರ್ ಲೇಖನ, ಟಾಲ್ಸ್ ಟಾಯ್ ದರ್ಶನ, ಬಿ.ಎಂ ಶ್ರೀಕಂಠಯ್ಯ, ಟೆಂಪೆಸ್ಟ್ ಅಧ್ಯಯನ, ಮುಂತಾದವು ಇವರ ವಿಮರ್ಶಾ ಬರಹಗಳು.

Key words: The 2020 -prestigious -GSS award- Karigowda Beechanahalli – choice- GS Shivadradhappa Vishwastha Mandali