ಚಿಕ್ಕಮಗಳೂರಿನತ್ತ ಮಾಜಿ ಸಿಎಂ ಎಸ್.ಎಂ ಕೃಷ್ಣ ಕುಟುಂಬ: ಹುಟ್ಟೂರು ಚೇತನಹಳ್ಳಿಯಲ್ಲಿ ಉದ್ಯಮಿ ಸಿದ್ದಾರ್ಥ್ ಅಂತ್ಯಸಂಸ್ಕಾರ…

ಚಿಕ್ಕಮಗಳೂರು,ಜು,31,2019(www.justkannada.in): ಕಾಫಿ ಡೇ ಸಂಸ್ಥಾಪಕ  ಮೃತ ಸಿದ್ಧಾರ್ಥ್  ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಚೇತನಹಳ್ಳಿಯಲ್ಲಿ ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚೇತನಹಳ್ಳಿಯಲ್ಲಿ ಮೃತ ಸಿದ್ಧಾರ್ಥ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಚಿಕ್ಕಮಗಳೂರು ನಗರದಲ್ಲಿ  ಸಿದ್ದಾರ್ಥ್  ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ  ಸಿದ್ಧತೆ ಮಾಡಲಾಗಿದೆ.  ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು ಆಸ್ಪತ್ರೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥೀವ ಶರೀರವನ್ನ ಚಿಕ್ಕಮಗಳೂರಿಗೆ ತರಲಾಗುತ್ತದೆ.

ಇನ್ನು ಮಾಜಿ ಸಿಎಂ ಎಸ್. ಎಂ ಕೃಷ್ಣ ಪತ್ನಿ ಪ್ರೇಮ ಹಾಗೂ ಮಗಳು ಮಾಳವೀಕಾ ಅವರು ಈಗಾಗಲೇ ಸದಾಶಿವನಗರದಿಂದ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಚಾಪರ್ ಮೂಲಕ ಸಿದ್ಧಾರ್ಥ್ ಅವರ ಕುಟುಂಬ ಮೂಡಿಗೆರೆಗೆ ತಲುಪಲಿದೆ.

Key words: Former CM- SMkrishna- family – Chikmagalur-Siddharth-funeral – Chetanahalli.