ಒಡಿಶಾದಲ್ಲಿ ಭೀಕರ ರೈಲು ದುರಂತ ಪ್ರಕರಣ: ಕನ್ನಡಿಗರು ಸೇಫ್.

ಬೆಂಗಳೂರು,ಜೂನ್,3,2023(www.justkannada.in):  ​ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಡಿಕ್ಕಿಯಾಗಿ ಸಂಭವಿಸಿದ ದುರಂತದಲ್ಲಿ ಕನ್ನಡಿಗರು ಪಾರಾಗಿದ್ದು ಸದ್ಯ ಸೇಫ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದಿಂದ ಪ್ರಯಾಣ ಬೆಳಸಿದ್ದ ಕನ್ನಡಿಗರು ಸೇಫ್​ ಆಗಿದ್ದಾರೆ. ದೇವರ ದಯೆಯಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ.  ಘಟನಾ ಸ್ಥಳಕ್ಕೆ ರಾಜ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಮಾಹಿತಿ  ನೀಡಲಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.

ಒಡಿಶಾದ ಬಾಲಸೋರ್​ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ 230ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನು ಅಪಘಾತ ಕೋರಮಂಡಲ್​​ ಎಕ್ಸಪ್ರೆಸ್​​, ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​ ಮತ್ತು ಗೂಡ್ಸ್​​ ರೈಲುಗಳ ಮಧ್ಯೆ ಸಂಭವಿಸಿದೆ. ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಬೆಂಗಳೂರು) ಹೌರಾ ಎಕ್ಸ್​ಪ್ರೆಸ್ ​ನಲ್ಲಿ 110 ಜನ ಕನ್ನಡಿಗರು ಕೂಡ ಪ್ರಯಾಣಿಸಿದ್ದು, ದುರಂತದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​​​ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

ರೈಲು ನಿನ್ನೆ ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್​ ಬದಲಿಸಿದೆ. ಇದರಿಂದ ಕಳಸ ತಾಲೂಕಿನ 110 ಜನ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Key words:  Terrible-train -accident -case – Odisha-Kannadigas-safe.