ಮೈಸೂರಿನ ಸಿಎಫ್ ಟಿಆರ್ ಐ ವತಿಯಿಂದ ಮೂರು ದಿನಗಳ ಕಾಲ ‘ಟೆಕ್ ಭಾರತ್’ ಮೇಳ.

ಮೈಸೂರು,ಮೇ,10,2022(www.justkannada.in): ಲಘು ಉದ್ಯೋಗ ಭಾರತ-ಕರ್ನಾಟಕ , ಐಎಂಎಸ್‌ ಫೌಂಡೇಶನ್‌ ಹಾಗೂ ಸಿಎಸ್‌ ಐ ಆರ್‌-ಸಿಎಫ್‌ ಟಿಆರ್‌ ಐ ಸಹಯೋಗದಲ್ಲಿ ಮೇ 19 ರಿಂದ ಮೂರು ದಿನಗಳ ಕಾಲ “ಟೆಕ್ ಭಾರತ್” ಮೇಳವನ್ನು ಆಯೋಜಿಸಲಾಗಿದೆ.

ಮೇ 19ರಿಂದ 21 ರವರೆಗೆ ಸಿಎಫ್‌ ಟಿ ಆರ್‌ ಐ ಕ್ಯಾಂಪಸ್‌ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಫುಡ್ ಕಂಪನಿ ಹಾಗೂ ತಂತ್ರಜ್ಞಾನ ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ. ಸಣ್ಣ ರೈತರು ಹಾಗೂ ತಾಂತ್ರಿಕ ವಿಭಾಗಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ತಂತ್ರಜ್ಞಾನದ ಬಗ್ಗ ರೈತರಿಗೆ ತಿಳುವಳಿಕೆ ನೀಡುವ ಕುರಿತು ವಸ್ತು ಪ್ರದರ್ಶನ ಜೊತೆಗೆ ಮಾಹಿತಿ ನೀಡಲಾಗುತ್ತಿದೆ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ CFTRI ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಹೇಳಿದ್ದಿಷ್ಟು….

ಭಾರತದ ಆಹಾರ ತಂತ್ರಜ್ಞಾನ ಮತ್ತು ಕೃಷಿಗೆ ಸಂಬಂಧಿಸಿದಂತೆ ಈ ಬಾರಿ ಸಮಾವೇಶ ನಡೆಯಲಿದ್ದು, ಈಗಾಗಲೇ ಇದರ ಪೂರ್ವಭಾವಿಯಾಗಿ ಮಾರ್ಚ್‌ 4,5ರಂದು ಬೆಂಗಳೂರಿನಲ್ಲಿ, ಜ.5ರಂದು ಬೆಳಗಾವಿಯಲ್ಲಿ ನಡೆದಿದ್ದು, ಅಂತಿಮವಾಗಿ ಮೈಸೂರಿನಲ್ಲಿ 3 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಕೇಂದ್ರದ ಸಚಿವರು, ರಾಜ್ಯದ ಸಿಎಂ, ಕೃಷಿ ಸಚಿವರು, ನಾನಾ ಸಂಸ್ಥೆಯ ಮುಖ್ಯಸ್ಥರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ,’’ ಎಂದು ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದೇಶದ ಬೇರೆ ಬೇರೆ ಭಾಗದ ಕೃಷಿ, ಆಹಾರ ಸಂಸ್ಕರಣೆಗೆ ಸಂಬಂಧಿಸಿದ ನಾನಾ ಸಂಸ್ಥೆಗಳು ಸಮ್ಮೇಳನ ಹಾಗೂ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ರೈತರಿಗೆ ಮಾಹಿತಿ ನೀಡಲಿದೆ. ಕೃಷಿ ಮತ್ತು ಆಹಾರ ಕ್ಷೇತ್ರಗಳಲ್ಲಿ ಸುಸ್ಥಿರ ತಂತ್ರಜ್ಞಾನಗಳನ್ನು ಪರಿಚಯಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ, ಅವರ ಕಾರ್ಯತಂತ್ರಗಳನ್ನು ಹೇಗೆ ಪರಿಷ್ಕರಿಸುವುದು , ಹೆಕ್ಟೇರಿಗೆ ಕೃಷಿ ಇಳುವರಿ ಅಥವಾ ಆಹಾರ ಉತ್ಪಾದನೆ ಹೆಚ್ಚಿಸುವ ಹೊಸ ಮತ್ತು ಸುಲಭ ವಿಧಾನಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ಅಲ್ಲದೆ ಬೆಳೆ ಕಟಾವು, ಸಂಸ್ಕರಣೆಯ ಪೂರ್ವ ಮತ್ತು ನಂತರದ ಸಮಯದಲ್ಲಿ ಕೃಷಿ ಉತ್ಪನ್ನಗಳ ವ್ಯರ್ಥ ತಪ್ಪಿಸುವ ಕು

Key words: “Tech Bharat- Fair – three days -CFTRI