ವೆಸ್ಟ್ ಇಂಡೀಸ್ ವಿರುದ‍್ಧದ ಟಿ-20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿ, ಬೂಮ್ರಾಗೆ ವಿಶ್ರಾಂತಿ.

ನವದೆಹಲಿ,ಜುಲೈ,14,2022(www.justkannada.in): ವೆಸ್ಟ್ ಇಂಡೀಸ್ ವಿರುದ್ಧದ ಐದು ಟಿ-20 ಪಂದ್ಯಗಳು ಮತ್ತು ಮೂರು ಏಕದಿನ ಸರಣಿಗೆ  ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ.

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮತ್ತು ಯಜುವೇಂದ್ರ ಚಹಲ್ ಗೆ ವಿಶ್ರಾಂತಿ ನೀಡಲಾಗಿದೆ.  ಇನ್ನು ಕೆಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್  ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ, ಇಬ್ಬರೂ ಫಿಟ್ ಆದ ನಂತರವೇ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ವೆಸ್ಟ್ ಇಂಡೀಸ್ ಏಕದಿನ ಸರಣಿಗೆ  ಭಾರತ ತಂಡ

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.

ವೆಸ್ಟ್ ಇಂಡೀಸ್ ಟಿ20 ಸರಣಿಗೆ  ಭಾರತ ತಂಡ.

ರೋಹಿತ್ ಶರ್ಮಾ, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಆರ್ ಅಶ್ವಿನ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವಾಸ್ ಖಾನ್, ಅವಾಸ್ ಮತ್ತು ಅರ್ಷದೀಪ್ ಸಿಂಗ್.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ

ಜುಲೈ 22  – ಮೊದಲ ಏಕದಿನ ಪಂದ್ಯ

ಜುಲೈ 24 – ಎರಡನೇ ಏಕದಿನ ಪಂದ್ಯ

ಜುಲೈ 27- ಮೂರನೇ ಏಕದಿನ ಪಂದ್ಯ

ಟಿ-20 ಸರಣಿ ವೇಳಾಪಟ್ಟಿ ಹೀಗಿದೆ.

ಜುಲೈ 29 –ಮೊದಲ ಟಿ-20, ಆಗಸ್ಟ್ 1 ರಂದು 2ನೇ ಟಿ-20 ಪಂದ್ಯ, – ಆಗಸ್ಟ್ 2 ರಂದು ಮೂರನೇ ಟಿ20 ಪಂದ್ಯ, ನಾಲ್ಕನೇ ಟಿ20 ಪಂದ್ಯ ಆಗಸ್ಟ್ 6 ರಂದು ನಡೆಯಲಿದೆ. ಇನ್ನು ಐದನೇ ಟಿ20 ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.

Key words: Team India – T20I – ODI- series -against -West Indies