ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸುತ್ತೇವೆ- ಮೈಸೂರಿನಲ್ಲಿ ಸಿಎಂ ವಿರುದ್ದ ವಾಲ್ಮೀಕಿ  ಸಮುದಾಯದ  ನಾಯಕರಿಂದ ಆಕ್ರೋಶ…

ಮೈಸೂರು,ಆ,29,2019(www.justkannada.in) ಸಚಿವ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದ ಹಿನ್ನೆಲೆ ಮೈಸೂರಿನಲ್ಲಿ ವಾಲ್ಮಿಕಿ ಸಮುದಾಯದ ನಾಯಕರು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿಗೆ ಆಗಮಿಸಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ನೋಡಲು ಬಂದ  ವಾಲ್ಮೀಕಿ ಸಮುದಾಯದ  ನಾಯಕರಿಗೆ  ನಿರಾಸೆಯಾಯಿತು. ಈ ವೇಳೆ ರಾಜ್ಯದಲ್ಲಿ  ನಡೆಯುವ  ಉಪ ಚುನಾವಣೆಯಲ್ಲಿ ಬಿಜೆಪಿಗೆ  ತಕ್ಕ ಪಾಠ ಕಳಿಸುತ್ತೇವೆ ಎಂದು ವಾಲ್ಮಿಕಿ ಸಮುದಾಯದ ನಾಯಕರು ಆಕ್ರೋಶ ಹೊರ ಹಾಕಿದರು.

ಸಚಿವ  ಶ್ರೀರಾಮುಲು ಗೆ ಉಪ ಮುಖ್ಯಮಂತ್ರಿ ಸ್ಥಾನ  ನೀಡುವಂತೆ  ಸಿಎಂ ಗೆ ಮನವಿ ಮಾಡಲು ನಗರದ  ಹೆಲಿಪ್ಯಾಡ್ ಬಳಿಗೆ ವಾಲ್ಮೀಕಿ ಜನಾಂಗದ ಮುಖಂಡರು ಬಂದಿದ್ದರು. ಈ ವೇಳೇ ಚುನಾವಣೆಗೂ ಮುನ್ನ  ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದ  ಸಿಎಂ ಇಂದು ಮಾತಿಗೆ ತಪ್ಪಿದ್ದಾರೆ  ಸಂಪುಟದಲ್ಲಿ  ಐದು ಸ್ಥಾನ  ವಾಲ್ಮೀಕಿ ಸಮುದಾಯಕ್ಕೆ ನೀಡಬೇಕು ಹಾಗೂ  ಶ್ರೀರಾಮುಲು ಅವರನ್ನ ಡಿಸಿಎಂ ಮಾಡಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ  ಬಿಜೆಪಿಗೆ ಸರಿಯಾಗಿ ಬುದ್ದಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳೆದ  ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25ಮಂದಿ ಸದಸ್ಯರನ್ನ ಆಯ್ಕೆ ಮಾಡಿದ್ದೇವೆ. ಅದರಲ್ಲಿ ನಮ್ಮದು  ಬಲ  ಇದೆ, ಶ್ರೀರಾಮುಲುಗೆ  ಉಪ ಮುಖ್ಯಮಂತ್ರಿ ಸ್ಥಾನ ನೀಡದೆ ಇದ್ದಲ್ಲಿ ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಳಿಸುತ್ತೇವೆ  ಎಂದು ವಾಲ್ಮೀಕಿ ಸಮುದಾಯದ ಮುಖಂಡರು ಕಿಡಿಕಾರಿದ್ದಾರೆ.

Key words: teach – BJP –lesson-by-election-Outrage -leaders – Valmiki community -mysore