ನಾಳೆ (ಡಿಸೆಂಬರ್ 14) ‘ಜಸ್ಟ್ ಕನ್ನಡ’ದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ.

ಮೈಸೂರು, ಡಿಸೆಂಬರ್ 13, 2023(www.justkannada.in): ಕನ್ನಡ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ, ಹದಿಮೂರು ವಸಂತಗಳನ್ನು ಪೂರೈಸಿರುವ ಜಸ್ಟ್ ಕನ್ನಡ ಸುದ್ದಿ ತಾಣದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಡಿಸೆಂಬರ್ 13ರಂದು ನಡೆಯಲಿದೆ.
ಮೈಸೂರಿನ ಕುವೆಂಪುನಗರದ ಪಿ ಆಂಡ್ ಟಿ ಬ್ಲಾಕ್’ನ ಮಹರ್ಷಿ ದಯಾನಂದ ಸರಸ್ವತಿ ರಸ್ತೆಯಲ್ಲಿರುವ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
ಮಾಜಿ ಶಾಸಕರು, ಕೆಡಿಪಿ ಸದಸ್ಯರೂ ಆದ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ವಿವಿ ವಿಶ್ರಾಂತ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಸಪ್ನ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Key words: December 14-inauguration – new office – ‘Just Kannada’