ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ ʼಟಾರ್ಗೆಟ್‌ ಪಿಎಸ್‌ಐʼ ವಿಶೇಷ ಕೋರ್ಸ್:  ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ…

Promotion

ಬೆಂಗಳೂರು,ಮಾರ್ಚ್,10,2021(www.justkannada.in):  ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಗಳು ಹಾಗೂ ಕಾನ್‌ ಸ್ಟೆಬಲ್‌ಗಳ ಪರೀಕ್ಷೆಗಾಗಿ ಅನಾಕಾಡೆಮಿ ಆರಂಭಿಸಿರುವ ವಿಶೇಷ ಕೋರ್ಸ್ʼಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನಗರದಲ್ಲಿ ಚಾಲನೆ ನೀಡಿದರು.jk

ಟಾರ್ಗೆಟ್‌ ಪಿಎಸ್‌ಐʼ ಹೆಸರಿನ ಈ ಕೋರ್ಸ್‌ಗಳನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು  ಕಾನ್‌ಸ್ಟೆಬಲ್‌ ಹುದ್ದೆಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದ್ದು, ಇದು ಪ್ರತ್ಯೇಕ ಅಧ್ಯಯನ ಮಾದರಿಯನ್ನು ಹೊಂದಿದೆ.

ಅನಾಕಾಡೆಮಿಯ ಕೋರ್ಸುಗಳನ್ನು ಆರಂಭಿಸಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಪೊಲೀಸ್‌ ಇಲಾಖೆ ಸೇರಬೇಕೆಂದು ಬಯಸುವ ಯುವ ಜನರಿಗೆ ಈ ಕೋರ್ಸುಗಳು ಹೆಚ್ಚು ಉಪಯುಕ್ತ. ಅಕಾಡೆಮಿಗೆ ಸೇರಿ ಸೂಕ್ತ ಮಾರ್ಗದರ್ಶನ” ಪಡೆಯಬಹುದು ಎಂದರು.

ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದರೆ, ಅದಕ್ಕೆ ಉತ್ತಮ ಪೂರ್ವ ಸಿದ್ಧತೆಯೂ ಅಗತ್ಯ. ನಿರಂತರ ಅಧ್ಯಯನವೂ ಮುಖ್ಯ ಎಂದು ಅವರು ಹೇಳಿದರು. target-psi-aspiring-police-service-special-course-dcm-ashwath-narayan

ಕರ್ನಾಟಕ ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ 2021 ಮಾರ್ಚ್ 9 ರಿಂದ ಬ್ಯಾಚ್‌ಗಳು ಪ್ರಾರಂಭವಾಗಿವೆ. ಪ್ರಚಲಿತ ವಿದ್ಯಮಾನಗಳು, ರಾಜಕೀಯ, ವಿಜ್ಞಾನ- ತಂತ್ರಜ್ಞಾನ, ಇತಿಹಾಸ, ಅನುವಾದ, ಅರ್ಥಶಾಸ್ತ್ರ, ಮತ್ತು ಪಿಎಸ್ಐ ಹಾಗೂ ಪಿಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಮಾನಸಿಕ ಸಾಮರ್ಥ್ಯದಂತಹ ಎಲ್ಲಾ ಪ್ರಮುಖ ವಿಷಯಗಳನ್ನು ಒಳಗೊಂಡ ಕೋರ್ಸುಗಳು ಇಲ್ಲಿವೆ.

ENGLISH SUMMARY….

‘Target PSI’ Special Course for aspirants who want to enter police services: DCM Ashwathnarayana inaugurates
Bengaluru,Mar. 10, 2021 (www.justkannada.in): Deputy Chief Minister Dr. C.N. Ashwathnarayana today launched the Special courses started by Anacademy for aspirants who intend to join the police services as Police Sub Inspectors and Police Constables.
The course titled ‘Target PSI’ is being provided for aspirants who want to join the police force. It comprises a separate study model. In his address, the DCM said this course is very helpful for those who want to join the police forces.target-psi-aspiring-police-service-special-course-dcm-ashwath-narayan
The batches for training for Karnataka Police Services have commenced from March 9, 2021. The course includes various subjects including current affairs, politics, science-technology, history translation, economics, and mental preparation for PSI and PC exams.
Keywords: Target PSI/ training/ Course for police aspirants/ inauguration/ DCM Dr. C.N. Ashwathnarayana

Key words: Target -PSI –aspiring- police service-Special Course-DCM- Ashwath Narayan.