ಜ.8 ರಂದು ಮೈಸೂರಿನಲ್ಲಿ ‘ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ’ ಕಾರ್ಯಕ್ರಮ: ಗೋಡೆ ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ…

ಮೈಸೂರು,ಜ,6,2020(www.justkannada.in):  ಸ್ವಚ್ಚ ಸರ್ವೇಕ್ಷಣೆ ಹಿನ್ನೆಲೆ ಜನವರಿ 8 ರಂದು ಮೈಸೂರು ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

“ಸ್ವಚ್ಚ ಭಾರತ ಅಭಿಯಾನ ಹಾಗೂ ಕಾಡು ಜೀವಿ ಸಂರಕ್ಷಣೆ” ಎಂಬ ಶೀರ್ಷಿಕೆಯಡಿ ಡಿ.ಕೆ ಕನ್ಸ್ಟ್ರಕ್ಷನ್ಸ್ & ನಮ್ಮ ಮೈಸೂರು ಫೌಂಡೇಶನ್ ರವರ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆಯು ಗೋಡೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿದೆ. ಚಾಮರಾಜೇಂದ್ರ ಮೃಗಾಲಯದ ಸಮೀಪ ಜನವರಿ 8 ರಂದು ಬೆಳಿಗ್ಗೆ 7.30ಕ್ಕೆ ಸ್ವಚ್ಛತಾ ಹೀರೋ/ಪೈಂಟಿಂಗ್ ಹೀರೋ’ ಕಾರ್ಯಕ್ರಮ ಆರಂಭವಾಗಲಿದೆ.

ಚಿತ್ರಕಲಾ & ಕಾಡು ಜೀವಿ ಸಂರಕ್ಷಣೆ ಪ್ರೇಮಿಗಳು ಹಾಗೂ ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ,  ಗೋಡೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಚಿತ್ರಕಲೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ತರಬೇಕಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10ಸಾವಿರ ರೂ. ದ್ವಿತೀಯ ಬಹುಮಾನ 5ಸಾವಿರ ರೂ ಇರುತ್ತದೆ. ಚಿತ್ರಕಲೆ ಅಳತೆ 5*12 ಅಡಿ ಆಗಿರುತ್ತದೆ.

Summary…

Mysuru City Corporation Under Swachh Survekshan 2020 “Swacchata Hero /Painting Hero” Program titled “Swachh Bharat Abhiyan & Wildlife Conservation” theme Mysuru City Corporation hosting a wall painting competition in collaboration with D.K. Constructions & Namma Mysuru Foundation Painting & wildlife conservation lovers & enthusiasts participating in the event.

Key words: Swacchata Hero /Painting Hero- Program – Mysuru City Corporation