ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆರೋಪ ಪ್ರಕರಣ: ಸಿಸಿಬಿಯಿಂದ ಅಂತರಾಷ್ಟ್ರೀಯ ಬುಕ್ಕಿ ಜತೀನ್ ಬಂಧನ..

ಬೆಂಗಳೂರು,ಜ,6,2020(www.justkannada.in): ಕೆಪಿಎಲ್ ಪಂದ್ಯಾವಳಿ ಮ್ಯಾಚ್ ಫಿಕ್ಸಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ: ಸಿಸಿಬಿ ಪೊಲೀಸರು ಅಂತರಾಷ್ಟ್ರೀಯ ಬುಕ್ಕಿ ಜತೀನ್ ನನ್ನ ನಿನ್ನೆ ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಆರೋಪಿ ಜತೀನ್ ನನ್ನ ಸಿಸಿಬಿ ಬಂಧಿಸಿದೆ. ಅಂತರಾಷ್ಟ್ರೀಯ ಬುಕ್ಕಿಯಾಗಿರುವ ಆರೋಪಿ ಜತೀನ್ ವಿರುದ್ದ  ಸಿಸಿಬಿ ಲುಕ್ ಔಟ್ ನೊಟೀಸ್ ನೀಡಿತ್ತು.  ಆರೋಪಿ  ಜತೀನ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಬಂಧನ ಮಾಡಲಾಗಿದೆ.

ಸದ್ಯ ಆರೋಪಿ ಬೇಲ್ ಪಡೆದುಕೊಂಡಿದ್ದು, ನಿನ್ನೆ ಸಂಪೂರ್ಣ ಆತನ ವಿಚಾರಣೆ ನಡೆಸಲಾಗಿದೆ. ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ನೊಟೀಸ್ ಜಾರಿ ಮಾಡಿದೆ.

Key words: KPL -match- fixing case-International bookie -Jatin –arrest- CCB