ಸುಮಲತಾ ಅವರು ನಮ್ಮ ಪಕ್ಷ ಸೇರಿದ್ರೆ ಅವರಿಗೂ ಒಳ್ಳೆಯದು, ಮಂಡ್ಯದಲ್ಲಿ ಬಿಜೆಪಿಗೂ ಶಕ್ತಿ-ಸಚಿವ ಸುಧಾಕರ್.

Promotion

ಚಿಕ್ಕಬಳ್ಳಾಪುರ,ಜನವರಿ,31,2023(www.justkannada.in):  ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೆ. ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಬಗ್ಗೆ ಕುತೂಹಲವಿದೆ. ಈ ಮಧ್ಯೆ ಸುಮಲತಾ ಅವರು ನಮ್ಮ ಪಕ್ಷಕ್ಕೆ ಸೇರಿದರೇ ಅವರಿಗೆ ಒಳ್ಳೆಯದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಸುಧಾಕರ್,  ಸುಮಲತಾ ಅವರು ಬಿಜೆಪಿ ಸೇರಿದರೇ ಹೆ್ಚ್ಚು ಲಾಭ.  ಅವರಿಗೂ ಒಳ್ಳೆಯದಾಗುತ್ತದೆ. ಇಬ್ಬರಿಗೂ ಗೆಲ್ಲುವ ಅವಕಾಶ ಹೆಚ್ಚರುತ್ತದೆ.  ಮಂಡ್ಯದಲ್ಲಿ ಬಿಜೆಪಿಗೆ ಶಕ್ತಿ ಬರುತ್ತೆ. ಸುಮಲತಾ ಅವರನ್ನ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಸಚಿವ ಆರ್ ಅಶೋಕ್ ಅವರು ಸುಮಲತಾ ಅವರ ಜೊತೆ ಸಂಪರ್ಕದಲ್ಲಿದ್ದು ಮಾತುಕತೆ ನಡೆಸಿದ್ದಾರೆ.

ಈ ಹಿಂದೆ ನಾನೂ ಕೂಡ ಅವರ ಬಳಿ ಚರ್ಚಿಸಿದ್ದೆ. ಭವಿಷ್ಯದಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಬರುವ ವಿಶ್ವಾಸವಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words:  Sumalatha- good –join-BJP -Minister -Sudhakar.