5ನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ…

ಬೆಂಗಳೂರು,ಏಪ್ರಿಲ್ 11,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ.  ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಧಾನವಾಗಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದೆ.Sanskrit Vivia,8th event,30 people,Ph.D,43graduates,M.Phil,Awarded 

ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾಧ್ಯಂತ ಸಾರಿಗೆ ಬಸ್ ಸಂಚಾರ ಕೂಡ ವಿರಳವಾಗಿದೆ. ಯುಗಾದಿ ಹಬ್ಬಕ್ಕೆ ತೆರಳುತ್ತಿರುವ  ಜನರು ಬಸ್ ಗಳಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಡುವೆ ಬೆಂಗಳೂರಿನಿಂದ 10 ಕೆಎಸ್ ಆರ್ ಟಿಸಿ ಬಸ್ ಗಳು ಸಂಚಾರ ಆರಂಭಿಸಿವೆ ಎನ್ನಲಾಗಿದೆ. ಬೆಂಗಳೂರಿನಿಂದ ಮಂಡ್ಯ, ಮೈಸೂರು, ಮಳವಳ್ಳಿ, ವಿರಾಜಪೇಟೆಗೆ ಬಸ್ ಸಂಚರಿಸುತ್ತಿವೆ ಎನ್ನಲಾಗಿದೆ. strike-transport-workers-5th-day

ಈ ನಡುವೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಖಾಸಗಿ ಬಸ್ ಗಳಿಗೆ ಅವಕಾಶ ನೀಡಲಾಗಿದ್ದು ಖಾಸಗಿ ಬಸ್ ಗಳ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನರನ್ನ ತುಂಬುತ್ತಿದ್ದಾರೆ. ಬಸ್ ನೊಳಗೆ ಬಸ್ ಟಾಪ್ ಮೇಲೆ ಜನರನ್ನ ತುಂಬುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Key words: Strike – transport workers – 5th day