ನ್ಯಾಯಾಧೀಶರ ಬಗ್ಗೆ ಅವಹೇಳನಕಾರಿ ಹೇಳಿಕೆ : ಸಿ. ಟಿ ರವಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒತ್ತಾಯಿಸಿ ಏಕಾಂಗಿ ಪ್ರತಿಭಟನೆ…

ಮೈಸೂರು,ಮೇ,14,2021(www.justkannada.in):  ರಾಜ್ಯ ಹೈಕೋರ್ಟ್ ಬಗ್ಗೆ ಗೌರವಾನ್ವಿತ ನ್ಯಾಯಾಧೀಶರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ ರವಿ ಆಡಿರುವ ಮಾತುಗಳು ಅಕ್ಷಮ್ಯ ಅಪರಾಧ. ಸಿ ಟಿ ರವಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಲೋಕೆಶ್ ಪಿಯಾ ಒತ್ತಾಯಿಸಿದ್ದಾರೆ.jk

ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒತ್ತಾಯಿಸಿ  ಪಾಲಿಕೆ ಸದಸ್ಯ ಲೋಕೆಶ್ ಪಿಯಾ ಏಕಾಂಗಿ ಪ್ರತಿಭಟನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳೇ ನೇರ ಹೊಣೆ. ಅದರಲ್ಲೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದನ್ನು ಪ್ರಶ್ನಿಸಿದ ರಾಜ್ಯ ಹೈಕೋರ್ಟ್ ಬಗ್ಗೆ ಗೌರವಾನ್ವಿತ ನ್ಯಾಯಾಧೀಶರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಟಿ ರವಿ ಆಡಿರುವ ಮಾತುಗಳು ಅಕ್ಷಮ್ಯ ಅಪರಾಧ. ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಮತ್ತು ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಇದು ವಾಸ್ತವ ಸಂಗತಿಯಾಗಿದೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿ ಮಾಡುವ ಕೆಲಸ ಮಾಡದೆ ಸಿಟಿ ರವಿ ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿರುವುದು ಉದ್ದಟತನದ ಪರಮಾವಧಿ.

ರಾಜ್ಯದ ಘನತೆವೆತ್ತ ನ್ಯಾಯಾಧೀಶರ ಬಗ್ಗೆ ಸಿಟಿ ರವಿ ನೀಡಿರುವ ಹೇಳಿಕೆ ಖಂಡನೀಯ. ಅಷ್ಟೇ ಅಲ್ಲ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ. ಇದನ್ನು ಮಾನ್ಯ ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿ. ಈ ರೀತಿಯ ಹೇಳಿಕೆ ನೀಡಿರುವ ಸಿ ಟಿ ರವಿ ವಿರುದ್ದ ಕೂಡಲೇ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು  ಎಂದು ಆಗ್ರಹಿಸಿದರು.statement-about-judge-judicial-abuse-case-against-ct-ravi-protest

ಸಿಟಿ ರವಿಯವರೇ ರಾಜ್ಯದಲ್ಲಿ ಜನರು ಆಕ್ಸಿಜನ್ ಇಲ್ಲದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಜನರ ಕಷ್ಟವನ್ನು ಅರಿತು ಅವರ ನೋವಿಗೆ ಸ್ಪಂದಿಸಿದ್ದು ಇದೇ ನ್ಯಾಯಾಲಯ. ಇಡೀ ರಾಜ್ಯದ ಜನರು ನ್ಯಾಯಾಲಯದ ಕಾರ್ಯಕ್ಷಮತೆ ಸಮಯಪ್ರಜ್ಞೆಯ ಬಗ್ಗೆ ಅಪಾರ ಗೌರವ ಸಲ್ಲಿಸುತ್ತಿರುವಾಗ ನಿಮ್ಮ ಈ ಹೇಳಿಕೆ ನಿಜಕ್ಕೂ ಅಸಹ್ಯವಾಗಿದೆ. ನೀವು ನಿಜಕ್ಕೂ ಯಾವ ಸೀಮೆಯ ಜನ ನಾಯಕರು ? ನಿಮಗೆ ನಾಚಿಕೆ ಮಾನ‌ ಮರ್ಯಾದೆ ಇದ್ದರೆ ಮೊದಲು ಗೌರವಾನ್ವಿತ ನ್ಯಾಯಾಧೀಶರ‌ ಕ್ಷಮೆಯಾಚಿಸಿ. ಇಲ್ಲವಾದರೆ ನಿಮ್ಮ ವಿರುದ್ಧ ಪ್ರಜಾಪ್ರಭುತ್ವದ ಪ್ರಮುಖ ಅಂಗ ನ್ಯಾಯಾಂಗವನ್ನು ನಿಂದಿಸಿದ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿವುದು ಎಂದು ಲೋಕೇಶ್ ಪಿಯಾ ಎಚ್ಚರಿಕೆ ನೀಡಿದ್ದಾರೆ.

Key words: statement -about –judge- judicial abuse -case –against-CT Ravi-protest