ಕೆಎಸ್ ಒಯು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆನ್ ಲೈನ್ ತರಬೇತಿ: ನಾಳೆ ಯದುವೀರ್ ರಿಂದ ಚಾಲನೆ…

ಮೈಸೂರು,ಮೇ,14,2021(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ಶಿಬಿರವನ್ನ ಆಯೋಜಿಸಿದ್ದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ನಾಳೆ(ಮೇ.15) ಬೆಳಗ್ಗೆ 11ಕ್ಕೆ ಆನ್ ಲೈನ್  ನಿಂದಲೇ ತರಬೇತಿ ಉದ್ಘಾಟಿಸಿ ಶುಭಹಾರೈಸುವರು.jk

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಈ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮವಾಗಿ ತರಬೇತಿಯನ್ನು ಆಯೋಜಿಸುವಲ್ಲಿ ನಿಷ್ಣಾತವಾಗಿದ್ದು ಇದರಿಂದ ಉತ್ತಮ ಫಲಿತಾಂಶ ಹೊರಬರುತ್ತಿದೆ. ಪ್ರಸ್ತುತ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ(ಐಬಿಪಿಎಸ್) ಸಾವಿರಾರು ಹುದ್ದೆಗಳಿಗೆ ವಿವಿಧ ಬ್ಯಾಂಕುಗಳು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳುತ್ತಿವೆ.online-training-ksou-competitive-exam-training-center-mysore

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕುಲಸಚಿವ ಪ್ರೊ.ಆರ್. ರಾಜಣ್ಣ ಉಪಸ್ಥಿತರಿರುವರು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Online- training – KSOU- Competitive exam -Training –Center- mysore