ರಾಜೀನಾಮೆ ಪರ್ವ ಆರಂಭ: ಜಿಂದಾಲ್ ಕಂಪನಿಯಿಂದ ರಾಜ್ಯ ಸರ್ಕಾರ ಕಿಕ್ ಬ್ಯಾಕ್ ಪಡೆದಿರುವುದು ಸತ್ಯ- ಮಾಜಿ ಡಿಸಿಎಂ ಆರ್. ಅಶೋಕ್ ಆರೋಪ…

ಮೈಸೂರು,ಜು,1,2019(www.justkannada.in): ಜಿಂದಾಲ್ ಕಂಪನಿಯಿಂದ ರಾಜ್ಯ ಸರ್ಕಾರ ಕಿಕ್ ಬ್ಯಾಕ್ ಪಡೆದಿರುವುದು ಸತ್ಯ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಆರ್. ಅಶೋಕ್,  ರಾಜ್ಯ ಮೈತ್ರಿ ಸರ್ಕಾರ ಕಿಕ್ ಬ್ಯಾಕ್ ನಿಂದ ಪಡೆದ ಹಣವನ್ನ ಬ್ಯಾಂಕ್ ನಲ್ಲಿ ಇಟ್ಟು ಹಣ ಮಾಡುವ ಉದ್ದೇಶ ಹೊಂದಿದೆ. ಇದು ಕೇವಲ ಕುಮಾರ ಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಬೇಕಿರುವುದು ಅಷ್ಟೇ. ಆನಂದ್ ಸಿಂಗ್ ಜಿಂದಾಲ್ ಕಂಪನಿಗೆ ಭೂಮಿ ನೀಡರೆ ರಾಜೀನಾಮೆ ನೀಡುತ್ತೇನೆ ಎಂದಿದ್ರು. ಅದೇ ರೀತಿ ಈಗ ರಾಜೀನಾಮೆ ನೀಡಿದ್ದಾರೆ‌..ಆನಂದ್‌ಸಿಂಗ್ ರಾಜೀನಾಮೆಯನ್ನ ನಾನು ಸ್ವಾಗತಿಸುತ್ತೇನೆ ಎಂದರು.

ಬಿಜೆಪಿಯವರು ಸಹ ಜಿಂದಾಲ್ ಕಂಪನಿಗೆ ಭೂಮಿ ಕೊಡುವುದುನ್ನ ವಿರೋದಿಸಿದ್ರು. ಆದರು ರಾಜ್ಯ ಸರ್ಕಾರ ಎಲ್ಲರ ವಿರೋಧದ ನಡುವೆ ಕಂಪನಿಗೆ ಭೂಮಿ ನೀಡಿತು. ರಾಜ್ಯ ಸರ್ಕಾರದ ನಿಲುವನ್ನ ಅವರ ಸರ್ಕಾರದವರೇ ವಿರೋಧ ಮಾಡುತ್ತಿದ್ದಾರೆ.ಈ ವಿಷಯದ ಬಗ್ಗೆ ಸಂಸತ್ ನಲ್ಲಿಯೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಶಾಸಕ ಅರ್ ಅಶೋಕ್ ತಿಳಿಸಿದರು.

ಆನಂದ್ ಸಿಂಗ್ ರಿಂದ ರಾಜೀನಾಮೆ ಪರ್ವ ಆರಂಭವಾಗಿದೆ. ಆನಂದ್ ಸಿಂಗ್ ಜತೆ ಹಲವು ಶಾಸಕರಿರುವುದು ಸತ್ಯ. ಎರಡು ದಿನ ಕಾಯಿರಿ ಅವರೇ ಕಚ್ಚಾಡಿಕೊಂಡು ಅವರೇ ಕಚ್ಚಾಡಿ ಹೊರ ಬರ್ತಾರೆ. ಸರ್ಕಾರ ಬೀಳೋದು ಖಚಿತ.  ಅದರಲ್ಲಿ ಬಿಜೆಪಿ ಪಾತ್ರವಿಲ್ಲ. ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ಕುಮಾರಸ್ವಾಮಿಗೆ ಮಾತ್ರ ಸರ್ಕಾರ ಬೇಕಾಗಿದೆ.ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಸರ್ಕಾರ ಬೇಕಾಗಿಲ್ಲ ಎಂದು ಲೇವಡಿ ಮಾಡಿದರು.

Key words:  state government- got – kick back – Jindal- Former DCM- r. Ashok -mysore