ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಚಿಂತನೆ- ಶಿಕ್ಷಣ ಸಚಿವ ಸುರೇಶ್ ಕುಮಾರ್…

ತುಮಕೂರು,ಮಾ.17,2021(www.justkannada.in): ಜುಲೈ 15 ರಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ ಕುಮರ್ ತಿಳಿಸಿದರು.jk

ತುಮಕೂರಿನಲ್ಲಿ ಇಂದು ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯ ಸರ್ಕಾರ ಮಕ್ಕಳ ಹಿತ ಮತ್ತು ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಚಿಂತನೆ ನಡೆಸಲಾಗಿದೆ. 1 ರಿಂದ 5ನೇ ತರಗತಿವರೆಗೆ ತರಗತಿ ಆರಂಭಿಸಬೇಕು. ಮಕ್ಕಳೆಲ್ಲ ಶೈಕ್ಷಣಿಕವಾಗಿ ವಿಮುಖರಾಗುತ್ತಿದ್ದಾರೆ ಎಂಬ ಮಾತು ಬಹಳಷ್ಟು ಜನರಿಂದ ಕೇಳಿ ಬರುತ್ತಿದೆ. ಆದರೆ ಮಕ್ಕಳ ಆರೋಗ್ಯ ದೃಷ್ಠಿಯಿಂದ ಈ ತರಗತಿಗಳನ್ನು ಆರಂಭಿಸುವ ಚಿಂತನೆ ನಡೆಸಿಲ್ಲ ಎಂದು ಸಚಿವ ಸುರೇಶ್‍ಕುಮಾರ್ ತಿಳಿಸಿದರು.start -next -academic year – July-Education Minister- Suresh Kumar.

ಇನ್ನು 1 ರಿಂದ 5ನೇ ತರಗತಿ ನಡೆಸಬಾರದು. ಸರ್ಕಾರದ ನಿಯಮ ಮೀರಿದರೇ ಅಂತಹ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪಠ್ಯಗಳಲ್ಲಿ ಭಗವತ್ಗೀತೆ ಅಳವಡಿಸುವ ವಿಚಾರ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು.

Key words:  start -next -academic year – July-Education Minister- Suresh Kumar.