Friday, September 18, 2026

BDA Apartments

Home Front Page ಪ್ರಧಾನಿ ಮೋದಿ ಬಗ್ಗೆ ಖರ್ಗೆ ಹೇಳಿಕೆ ಖಂಡನೀಯ:  ವಿಷ ಬೀಜ ಬಿತ್ತಿ ಕಾಂಗ್ರೆಸ್ ಗೆಲ್ಲುವ ಹುನ್ನಾರ-...

ಪ್ರಧಾನಿ ಮೋದಿ ಬಗ್ಗೆ ಖರ್ಗೆ ಹೇಳಿಕೆ ಖಂಡನೀಯ:  ವಿಷ ಬೀಜ ಬಿತ್ತಿ ಕಾಂಗ್ರೆಸ್ ಗೆಲ್ಲುವ ಹುನ್ನಾರ- ಮಾಜಿ ಸಿಎಂ ಬಿಎಸ್ ವೈ ವಾಗ್ದಾಳಿ.

ಕಲಬುರಗಿ,ಏಪ್ರಿಲ್,28,2023(www.justkannada.in): ಮೋದಿ ವಿಷಸರ್ಪವಿದ್ದಂತೆ, ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ಖಂಡಿಸಿದ್ದಾರೆ.

ಈ ಕುರಿತು ಇಂದು ಕಲಬುರಗಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ  ಬಿಎಸ್ ಯಡಿಯೂರಪ್ಪ, ಇಡಿ ವಿಶ್ವ ಮೆಚ್ಚಿರುವಂತಹ  ಒಬ್ಬ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ. ಇಂತವರ  ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿರುವುದು ಖಂಡನಾರ್ಹ. ಮಲ್ಲಿಕಾರ್ಜುನ ‌ಖರ್ಗೆ ಹೇಳಿಕೆ ರಾಜ್ಯದಲ್ಲಿ ಮತಗಳನ್ನ ಕಾಂಗ್ರೆಸ್ ಕಳೆದುಕೊಳ್ಳಲಿದೆ ಎಂದರು.

ದೇಶದ ‌ಪ್ರಧಾನಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಕಾರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಪಂಚಾಯತಿ ಅಧ್ಯಕ್ಷನು ಕೂಡಾ ರಾಜೀನಾಮೆ ಕೊಡಲು ಹಿಂದೇಟು ಹಾಕುತ್ತಾರೆ.  ಆದರೆ ನಾನು‌ ರಾಜೀನಾಮೆ ಕೊಟ್ಟೆ. ಅಂದೇ ನಾನು ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಬೇಕೆಂದು ತೀರ್ಮಾನಿಸಿದೆ. ಹೀಗಾಗಿ ಈ ಚುನಾವಣೆಯಲ್ಲಿ ರಾಜ್ಯದ ಮೂಲೆ ಮೂಲೆಗೆ ಹೋಗಿ ಪ್ರಚಾರ ಮಾಡುತ್ತಿರುವೆ. ಹಣದ ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಹುನ್ನಾರ ನಡಸಿದೆ ಎಂದು ಕಿಡಿಕಾರಿದರು.

Key words: mallikarjuna Kharge- statement -about -PM Modi – former CM-BS yeddyurappa