ಯಶ್-ರಾಧಿಕಾ ಸ್ಪೆಷಲ್ ಡೇಗೆ ಸ್ಪೆಷಲ್ ಫೋಸ್ಟ್ !

ಬೆಂಗಳೂರು, ಫೆಬ್ರವರಿ 14, 2020 (www.justkannada.in): ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಗೆ ಇಂದು ವಿಶೇಷ ದಿನವಂತೆ!

ಹೌದು. ಇಂದು ಪ್ರೇಮಿಗಳ ದಿನ. ಇದರ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ಯಶ್ ಜತೆಗಿರುವ ಎಂಟು ವರ್ಷಗಳ ಹಲವು ಫೋಟೋಗಳನ್ನು ಹಾಕಿಕೊಂಡಿರುವ ರಾಧಿಕಾ ಈ ವ್ಯಾಲೆಂಟೈನ್ಸ್ ಡೇ ನಮಗೆ 10 ನೇ ವರ್ಷದ್ದು ಎಂದು ಹೇಳಿದ್ದಾರೆ.

10 ನೇ ವರ್ಷದ ವ್ಯಾಲೆಂಟೈನ್ಸ್ ಡೇ ಪಯಣದಲ್ಲಿ ನಾವು ನಮ್ಮ ಕೈಯಲ್ಲಿ ಇಬ್ಬರು ಅಮೂಲ್ಯ ರತ್ನಗಳನ್ನು ಹಿಡಿದುಕೊಂಡಿದ್ದೇವೆ ಎಂದು ತಮ್ಮಿಬ್ಬರು ಮಕ್ಕಳನ್ನು ನೆನಪು ಮಾಡಿಕೊಂಡಿದ್ದಾರೆ.