ಶಿವರಾತ್ರಿಗೆ ‘ಶಿವಾಜಿ ಸುರತ್ಕಲ್’ ಜೊತೆ ಜಾಗರಣೆ ಮಾಡಿ !

ಬೆಂಗಳೂರು, ಫೆಬ್ರವರಿ 14, 2020 (www.justkannada.in): ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್’ ಬಿಡುಗಡೆಗೆ ಸಜ್ಜಾಗಿದೆ.

ವಿಭಿನ್ನ ಪಾತ್ರದಲ್ಲಿ ರಂಜಿಸಲು ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಗೆ ಬರಲಿದೆ. ಆಕಾಶ್ ಶ್ರೀವತ್ಸ ಆಕ್ಷನ್ ಕಟ್ ಹೇಳಿರೋ ಈ ಚಿತ್ರವನ್ನು ರೇಖಾ.ಕೆ.ಎನ್, ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ.

`ಶಿವಾಜಿ ಸುರತ್ಕಲ್’ ರಮೇಶ್ ಅರವಿಂದ್ 101ನೇ ಚಿತ್ರ ಅನ್ನೋದು ಒಂದು ವಿಶೇಷ ಆದ್ರೆ ಈ ಚಿತ್ರದಲ್ಲಿ ಪತ್ತೇದಾರಿ ನಾಯಕನಾಗಿ ಎರಡು ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.