ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಚಿನ್ನ ಕೊರಳಿಗೇರಿಸಿಕೊಂಡ ಸರಿತಾ ಮೋರ್

ಬೆಂಗಳೂರು, ಏಪ್ರಿಲ್ 16, 2021 (www.justkannada.in): 

ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸರಿತಾ ಮೋರ್ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಕಜಕಸ್ತಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಸೋಲುಕಂಡಿದ್ದ ಮಂಗೋಲಿಯಾದ ಶೂಡೋರ್ ಬಾತರ್ಜಾವಿನ್ ವಿರುದ್ಧವೇ ಫೈನಲ್​ನಲ್ಲಿ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಫೈನಲ್​ ಪಂದ್ಯದಲ್ಲಿ 1-7ರಲ್ಲಿ ಹಿನ್ನಡೆ ಅನುಭವಿಸಿದ್ದ ಸರಿತಾ ಅದ್ಭುತ ರೀತಿಯಲ್ಲಿ ಕಮ್ ​ಬ್ಯಾಕ್​ 10 – 7 ಅಂಕಗಳ ಅಂತರದಿಂದ ಗೆದ್ದು ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ.

ಸೆಮಿಫೈನಲ್​ನಲ್ಲಿ ಕಿರ್ಗಿಸ್ತಾನದ ನುರೈದಾ ಅನರ್ಕುಲೊವಾ ವಿರುದ್ಧ ಕೇವಲ 90 ಸೆಕೆಂಡ್​ಗಳಲ್ಲೇ ಪಂದ್ಯವನ್ನು ಗೆದ್ದು ಫೈನಲ್ ಪ್ರವೇಶಿಸಿದ್ದರು.