ಕಂಬ್ಯಾಕ್ ಸಾನಿಯಾ ಮಿರ್ಜಾ ಫೋಟೋ ವೈರಲ್ !

ನವದೆಹಲಿ, ಮಾರ್ಚ್ 13, 2020 (www.justkannada.in): ಬಹಳ ದಿನಗಳ ಬಳಿಕ ಸಾನಿಯಾ ಮಿರ್ಜಾ ಕಂಬ್ಯಾಕ್ ಆದಂತೆ ಆಗಿದೆ.

ಮಾ.8ರಂದು ದುಬೈನಲ್ಲಿ ನಡೆದ ಫೆಡ್ ಕಪ್ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ ರೋಮಾಂಚನಕಾರಿಯಾಗಿ ಸಮಬಲ ಸಾಧಿಸಿದ ಸಾನಿಯಾ ಮಿರ್ಜಾ ಅವರ ಫೋಟೋ ಈಗ ಸದ್ದು ಮಾಡುತ್ತಿದೆ.

ಈ ಮ್ಯಾಚ್ ಗಿಂತ ಮೊದಲು ಸಾನಿಯಾ ತಮ್ಮ ಪುತ್ರ ಇಝಾನ್ ನನ್ನು ಒಂದು ಕೈಯಲ್ಲಿ ಎತ್ತಿಕೊಂಡಿದ್ದು, ಇನ್ನೊಂದು ಕೈಯಲ್ಲಿ ಟೆನಿಸ್ ಬ್ಯಾಟನ್ನು ಹಿಡಿದಿದ್ದಾರೆ.

ಈ ಫೋಟೋ ಈಗ ಭರ್ಜರಿ ವೈರಲ್ ಆಗಿದ್ದು ನೆಟ್ಟಿಗರ ಮನ ತಟ್ಟಿದೆ.