ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಆರಂಭ : ಮೊದಲ ಟ್ರಿಪ್ ಗೆ 10 ಮಂದಿ ಭಾಗಿ

ಮೈಸೂರು,ಅಕ್ಟೋಬರ್,11,2020(www.justkannada.in) : ಕೊರೊನಾದಿಂದಾಗಿ ಕಳೆದ 7 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಭಾನುವಾರ ಸಫಾರಿ ಮತ್ತೆ ಆರಂಭವಾಗಿದೆ.jk-logo-justkannada-logoಪ್ರತಿದಿನ ಬೆಳಿಗ್ಗೆ 6ರಿಂದ 7.30 ಹಾಗೂ ಮಧ್ಯಾಹ್ನ 2 ರಿಂದ 3.30ರವರೆಗೆ ಮಾತ್ರ ಟಿಕೆಟ್ ನೀಡಲಾಗುವುದು. ಸಫಾರಿ ಮೊದಲ ಟ್ರಿಪ್ ಬೆಳಿಗ್ಗೆ 6 ರಿಂದ 7.30, ಎರಡನೇ ಟ್ರಿಪ್ 7.30ರಿಂದ 9 ಗಂಟೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಸಂಜೆ 4 ರಿಂದ 5.30ರವರೆಗೆ ಸಫಾರಿ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಟ್ರಿಪ್ ಗೆ 10 ಮಂದಿ ಆಗಮಿಸಿದ್ದರು ಎಂದು ವಲಯ ಅರಣ್ಯಾಧಿಕಾರಿ ರವೀಂದ್ರ ಮಾಹಿತಿ ನೀಡಿದರು.

4-5 ದಿನಗಳಿಂದ ಪ್ರಾಯೋಗಿಕವಾಗಿ ನಾಗರಹೊಳೆಯಿಂದಲೇ ಸಫಾರಿ ಆರಂಭ

Safari-start-Nagarahole National Park-10-participants-first-trip

ಕಳೆದ ಮಾರ್ಚ್ 23 ರಿಂದ ಕೊರೊನಾ ಹಿನ್ನೆಲೆಯಲ್ಲಿ ನಾಗರಹೊಳೆ ಸೇರಿದಂತೆ ಎಲ್ಲ ಕಡೆಗಳಿಂದ ತೆರಳುತ್ತಿದ್ದ ಸಫಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾದಿಂದ ವಿಧಿಸಲಾಗಿದ್ದ, ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಸಫಾರಿಗೆ ನಾಗರಹೊಳೆ ಕೇಂದ್ರ ಸ್ಥಾನದಿಂದ ಚಾಲನೆ ದೊರೆತಿರುವುದು ವನ್ಯ-ಪರಿಸರ ಪ್ರೇಮಿಗಳಿಗೆ ಸಂತಸ ಉಂಟುಮಾಡಿದೆ.

ಕೊರೊನಾ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 4-5 ದಿನಗಳಿಂದ ಪ್ರಾಯೋಗಿಕವಾಗಿ ನಾಗರಹೊಳೆಯಿಂದಲೇ ಸಫಾರಿ ಆರಂಭಿಸಲಾಗಿದೆ. ಮಳೆ ಹೆಚ್ಚಿರುವ ವೇಳೆ ಸಫಾರಿ ನಡೆಸಲು ಸಾಧ್ಯವಾಗುವುದಿಲ್ಲ. ಈ ಸಂದರ್ಭ ಸಾರ್ವಜನಿಕರು ಸಹಕರಿಸುವಂತೆ ನಾಗರಹೊಳೆ ವಲಯ ಅರಣ್ಯಾಧಿಕಾರಿ ಅಮಿತ್ ಗೌಡ ತಿಳಿಸಿದ್ದಾರೆ.

Safari-start-Nagarahole National Park-10-participants-first-trip
ಸಾಂದರ್ಭಿಕ ಚಿತ್ರ

key words : Safari-start-Nagarahole National Park-10-participants-first-trip