ಸ್ಪೀಕರ್ ಆಗಿ ಮುಂದುವರೆಯುತ್ತೀರಾ ಎಂಬ ಪ್ರಶ್ನೆಗೆ ಆರ್.ವಿ ದೇಶಪಾಂಡೆ ಕೊಟ್ಟ ಉತ್ತರವಿದು..

ಬೆಂಗಳೂರು,ಮೇ,22,2023(www.justkannada.in): ಇಂದಿನಿಂದ ರಾಜ್ಯ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ಈಗಾಗಲೇ ಹಂಗಾಮಿ ಸ್ಫೀಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರ್.ವಿ ದೇಶಪಾಂಡೆ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.

ಈ ಮಧ್ಯೆ ತಾವೇ ಸ್ಪೀಕರ್ ಆಗಿ ಮುಂದುವರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಆರ್.ವಿ ದೇಶಪಾಂಡೆ, ನನಗೆ ಯಾವುದೇ ಆಸೆ ಇಲ್ಲ. ಎಂಟು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿದ್ದೇನೆ. ವೀರಪ್ಪ ಮೋಯ್ಲಿ, ಬಂಗಾರಪ್ಪ ಕಾಲದಲ್ಲಿ ಕೆಲಸ ಮಾಡಿದ್ದೇನೆ. ನಾಡಿನ ಜನರ ಮನಸ್ಸಿನಲ್ಲಿ ನಾನಿದ್ದೇನೆ. ಅವರು ನನ್ನಿಂದ ಸೇವೆ ಬಯಸಿದ್ದಾರೆ ಎಂದರು.

ನನಗೆ ಪ್ರಮಾಣವಚನ ರಾಜ್ಯಪಾಲರು ಕೊಟ್ಟಿದಾರೆ. ಇಂದಿನಿಂದ ಮೂರು ದಿನಗಳ ಕಾಲ ಅಧಿವೇಶನ  ನಡೆಯುತ್ತಿದೆ. ನನ್ನ ಬಿಟ್ಟು 223 ಶಾಸಕರಿಗೆ ನಾನು ಪ್ರಮಾಣವಚನ ಕೊಡ್ತೀನಿ. ಇದು ಬಹಳ‌ದೊಡ್ಡ ಮಹತ್ವದ ಕಾರ್ಯ. ಪ್ರಮಾಣ ವಚನದ ಬಳಿಕ ಸಂವಿಧಾನದ ಪ್ರಕಾರ ಎಲ್ಲರೂ ಶಾಸಕರಾಗಲಿದ್ದಾರೆ. ಮೇ. 24ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ. ನಾನು ಪ್ರೊಸೀಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಲಿದ್ದೇನೆ ಎಂದರು.

ಸಚಿವಾಕಾಂಕ್ಷಿಗಳಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ, ಪಕ್ಷ ಕೊಟ್ರೆ ಮಾಡ್ತೀನಿ.  ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದರು.

Key words: RV Deshpande – question – will- continue – Speaker.