ರಾಜ್ಯದಲ್ಲಿ ಗಲಭೆಗೆ ಬಿಜೆಪಿ ನಾಯಕರ ವರ್ತನೆಯೇ ಕಾರಣ- ಆರೋಪಿ ಆದಿತ್ಯರಾವ್ ಬಂಧನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….

ಬೆಂಗಳೂರು,ಜ,22,2020(www.justkannada.in): ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ ಆರೋಪಿ ಆದಿತ್ಯರಾವ್ ಬಂಧನ ನಾಟಕೀಯ. ಇದರ ಬಗ್ಗೆ ಅನುಮಾನವಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಬಾಂಬ್ ಇಟ್ಟಿದ್ದು ಮುಸ್ಲೀಂ ಸಮುದಾಯದವರಾಗಿದ್ದರೇ ಬಿಜೆಪಿಯವರು ಮುಂದೆ ನಿಂತು ಓಹೋ ಎಂದು ಕೂಗುತ್ತಿದ್ದರು. ರಾಜ್ಯದಲ್ಲಿ ಎಲ್ಲರೂ ವಿಶ್ವಾಸದಿಂದ ಬದುಕುತ್ತಿದ್ದಾರೆ. ನನಗೆ ಜಾತಿ ಇಲ್ಲ. ನಾನು ಜಾತಿ ರಾಜಕಾರಣ ಮಾಡಲ್ಲ. ಬಿಜೆಪಿಯವರು ಜಾತಿ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದ್ದಾರೆ.  ರಾಜ್ಯದಲ್ಲಿ ಗಲಭೆಗೆ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದರು.

ಆರೋಪಿ ಆದಿತ್ಯರಾವ್ ಬಂಧನ ನಾಟಕೀಯ.  ಆತ ಹೇಗೆ ಬೆಂಗಳೂರಿಗೆ ಬಂದ. ಆತ ಪೊಲೀಸರ ಮುಂದೆ ಶರಣಾಗ್ತಾನೆ ಎಂದು ಹೇಗೆ ಮಾಹಿತಿ ಬಂತು. ಇದು ಪಟಾಕಿ ಪ್ರಕರಣ ಅಲ್ಲದೇ ಮತ್ತೇನು..? ಅಣುಕು ಪ್ರದರ್ಶನ ಎಂದು ಹೇಳಿದ್ದು ತಪ್ಪಾ ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

Key words:  arrest -accused -Adityarao – suspicious- Former CM- HD Kumaraswamy