ಬೆಂಗಳೂರಿನಲ್ಲಿ ಸಂಜೆ 6ರಿಂದ ನಿರ್ಬಂಧ: ನಿಯಮ ಮೀರಿದ್ರೆ ಪೊಲೀಸರಿಂದ ಕ್ರಮ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಡಿಸೆಂಬರ್,31,2021(www.justkannada.in): ಹೊಸ ವರ್ಷ ಸಂಭ್ರಮದಿಂದ ಆಚರಿಸಬೇಕು. ಬೆಂಗಳೂರು ನಗರದಲ್ಲಿ ಸಂಜೆ 6ರಿಂದ ನಿರ್ಬಂಧ ಇದೆ. ಮನೆಯಲ್ಲೇ ಹೊಸವರ್ಷ ಆಚರಿಸಿ.  ನಿಯಮ ಮೀರಿದ್ರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ರಾತ್ರಿಯಿಂದ ನೈಟ್ ಕರ್ಫ್ಯೂ ಇದೆ. ಹೊಸ ವರ್ಷ ಸಂಭ್ರಮದಿಂದ ಆಚರಿಸಬೇಕು. ಎಂಟು ರಾಜ್ಯದಲ್ಲಿ ಕರೋನಾ ಅಟ್ಟಹಾಸ ಇದೆ. ಕರ್ನಾಟಕದಲ್ಲೂ ಸೋಂಕು ಹೆಚ್ಚಿದೆ.ಹೀಗಾಗಿ ನಿರ್ಬಂಧ ಹೇರಲಾಗಿದೆ. ಜನತೆ ಸಹಕಾರ ನೀಡಬೇಕು. ಮನೆಯಲ್ಲಿ ಹೊಸ ವರ್ಷಾಚರಣೆ ಮಾಡಬಹುದು. ರಸ್ತೆಯಲ್ಲಿ ಮಾಡಲು ಅವಕಾಶ ಇಲ್ಲ. ನಿಯಮ ಮೀರಿದ್ರೆ ಪೊಲೀಸರು ಕ್ರಮ ಕೈಗೊಳ್ತಾರೆ. ಜನ ಅದಕ್ಕೆ ಅವಕಾಶ ನೀಡಬೇಡಿ. ನಿರ್ಬಂಧದಿಂದ ಹೋಟೆಲ್, ಪಬ್ ಮೇಲೆ ಹೊಡೆತ ಬೀಳಲಿದೆ. ಆದರೆ ರೋಗ ಬರೋದನ್ನ ತಡೆಯಬೇಕು. ಕಳೆದ ಬಾರಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗಿತ್ತು. ಜನ ಸಹಕರಿಸಬೇಕು, ಆ ರೀತಿ ಮತ್ತೆ ಆಗೋದು ಬೇಡ.ಡಿ.ಜೆ ಹಾಕಿ ಕುಣಿಯೋದು ಬೇಡ, ರಾತ್ರಿ ಹತ್ತು ಗಂಟೆವರೆಗೂ ಮಾತ್ರ ಅವಕಾಶವಿದೆ ಎಂದರು.

ಕೊರಗ ಕುಟುಂಬದ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ.

ಉಡುಪಿ ಕೊರಗ ಕುಟುಂಬದ ಮೇಲೆ ಪೊಲೀಸರ ಹಲ್ಲೆ ಪ್ರಕರಣ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣದ ಬಗ್ಗೆ ಎನ್‌ಕ್ವೈರಿ ಆಗ್ತಿದೆ. ಈಗಾಗಲೇ ಹಲ್ಲೆ ಮಾಡಿದವರ ಸಸ್ಪೆಂಡ್ ಮಾಡಲಾಗಿದೆ. ಸಾಮೂಹಿಕವಾಗಿ ಬೇರೆಡೆ ವರ್ಗ ಮಾಡಲಾಗಿದೆ. ಕೋಟಾ  ಅವರ ಕ್ಷೇತ್ರದ ಕೊರಗ ಸಮುದಾಯದವರು. ಆ ಜನಾಂಗದವರು ಮದುವೆ ಖುಷಿಯಲ್ಲಿದ್ರು. ನಮ್ಮ ಪೊಲೀಸರು ಅತಿರೇಕ ಮಾಡಿದ್ದಾರೆ. ಅದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸ್ವತಃ ಎಸ್.ಪಿ ಅವರೇ ಹೋಗಿ ಹೇಳಿದ್ದಾರೆ. ಕುಟುಂಬದ ಮೇಲೆ ಯಾವುದೇ ಎಫ್.ಐ.ಆರ್ ಹಾಕೋದಿಲ್ಲ ಎಂದು

ಕಾಂಗ್ರೆಸ್ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಆರು ವರ್ಷ ಏನೂ ಮಾಡಲಿಲ್ಲ. ಅವರು ಅಧಿಕಾರದಲ್ಲಿ ಇದ್ದಾಗ ಒಂದು ಡಿಪಿಆರ್ ಕೂಡ ಮಾಡಲಿಲ್ಲ. ಅಂತವರು ಈಗ ಗಿಮ್ಮಿಕ್ ಮಾಡಲು ಪಾದಯಾತ್ರೆ ಹೊರಟಿದ್ದಾರೆ. ಇದರಿಂದ ನಾವು ಗೆಲ್ಲಬಹುದು ಅನ್ನೋ ಭ್ರಮೆಯಲ್ಲಿ ಇದ್ದಾರೆ ಎಂದು ಟೀಕಿಸಿದರು.

Key words: Restriction – 6 pm – Bangalore- Action – police – Home Minister- Araga jnanendra