ರಾಜೀನಾಮೆ ನೀಡಿದ ಶಾಸಕರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ವಿಚಾರ: ಗೃಹಸಚಿವರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ರಮೇಶ್ ಕುಮಾರ್….

ಬೆಂಗಳೂರು,ಜು,22,2019(www.justkannada.in):  ರಾಜೀನಾಮೆ ನೀಡಿದ ಅತೃಪ್ತ ಶಾಸಕರ  ಟ್ರಾಫಿಕ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ ಪಾಟೀಲ್ ಗೆ ಸ್ಪೀಕರ್ ರಮೇಶ್ ಕುಮಾರ್ ತರಾಟೆ ತೆಗೆದುಕೊಂಡರು.

ಸ್ಪೀಕರ್ ಮುಂದೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆ ಅತೃಪ್ತಶಾಸಕರು ಮುಂಬೈ ನಿಂದ ಬೆಂಗಳೂರಿಗೆ ಬಂದು ವಿಮಾನನಿಲ್ದಾಣದಿಂದ ವಿಧಾನಸೌಧದವರೆಗೆ ಝೀರೋ ಟ್ರಾಫಿಕ್ ನಲ್ಲಿ ಬಂದಿದ್ದರು. ಈ ಸಂಬಂಧ ಗೃಹ ಸಚಿವ ಎಂಬಿ ಪಾಟೀಲ್ ಗೆ ಫುಲ್ ಕ್ಲಾಸ್ ತೆಗೆದು ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡಿದ ಶಾಸಕರಿಗೆ ಗೃಹ ಇಲಾಖೆ ಝೀರೋ ಟ್ರಾಫಿಕ್  ಕೊಟ್ಟಿದೆಯಾ ಇಲ್ಲವಾ ಮಾತ್ರ ಹೇಳಿ. ಝೀರೋ ಟ್ರಾಫಿಕ್  ಕೊಟ್ಟಿದ್ದರೆ ಯಾರುಕೊಟ್ಟಿದ್ದು, ನಿಮ್ಮ ಅಧಿಕಾರಿಗಳು ಕೊಟ್ಟಿದ್ದು ಅದನ್ನ ಇಡಿ ದೇಶವೇ ನೋಡಿದೆ.  ಗೃಹ ಸಚಿವರಾಗಿ ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲ ಅಂದ್ರೆ ಹೇಗೆ..?  ಎಂದು ಗರಂ ಆದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಮಾಧುಸ್ವಾಮಿ,  ಝೀರೋ ಟ್ರಾಫಿಕ್ ಕೊಟ್ಟಿಲ್ಲ  ಹೀಗೆ ಹೇಳಲು ನಿಮ್ಮ ಮನಸ್ಸು ಹೇಗೆ ಒಪ್ಪುತ್ತೆ. ಗೃಹ ಇಲಾಖೆಯನ್ನ ಗೃಹ ಸಚಿವರು  ನಡೆಸುತ್ತಿದ್ದಾರೋ ಇಲ್ಲವೂ. ಗೃಹ ಇಲಾಖೆಯನ್ನ ಯಾರು ಬೇಕಾದರೂ ನಡೆಸಬಹುದು ಎಂದು ಲೇವಡಿ ಮಾಡಿದರು.

Key words: resigned MLAs- Zero traffic- arrangements-speaker -Ramesh Kumar -full class – Home Minister.