ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಸರ್ಕಾರದ ನಡೆಗೆ ಮಾಜಿ ಸಚಿವ ಸಿ.ಟಿ ರವಿ ಖಂಡನೆ.

ಮಂಡ್ಯ,ಆಗಸ್ಟ್,22,2023(www.justkannada.in):   ರಾಜ್ಯದಲ್ಲಿ ಉತ್ತಮ ಮಳೆಯಾಗದಿದ್ದರೂ, ಕೆ.ಆರ್ ಎಸ್ ಡ್ಯಾಂ ಭರ್ತಿಯಾಗದಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನ ಮಾಜಿ ಸಚಿವ ಸಿ.ಟಿ ರವಿ ಖಂಡಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಸಿ.ಟಿ ರವಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.  ನಮ್ಮ ಭಾಗದ ರೈತರಿಗೆ ನೀರು ಬಿಡುವುದನ್ನ ಬಿಟ್ಟು ತಮಿಳುನಾಡಿಗೆ ನೀರು ಬಿಡುತ್ತಿದೆ. ಇದನ್ನ ನಾವು ಖಂಡಿಸುತ್ತೇವೆ.

ಮಂಡ್ಯ ಪಾಲಿಗೆ ಈ ಸರ್ಕಾರದ ನಡೆ ಮಾರಕವಾಗಿದೆ. ಉತ್ತಮ ಮಳೆ ಬಂದು ಡ್ಯಾಂಗಳು ಭರ್ತಿಯಾಗಿದ್ದರೇ ನೀರು ಬಿಡಲಿ.  ಆದರೆ ನಮಗೆ ಸಂಕಷ್ಟದ ಇದ್ದಾಗ ನೀರು ಬಿಡುಗಡೆ ಹೇಗೆ ಸಾಧ್ಯ ಎಂದು ಸಿಟಿ ರವಿ ಪ್ರಶ್ನಿಸಿದರು.

Key words: Congress politics – Cauvery river- water- CT Ravi -condemns -government’s- move.