ಕ್ರಿಕೆಟ್ ಟೂರ್ನಿಮೆಂಟ್ ವೇಳೆ ಕಿರಿಕ್: ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ.

ದೊಡ್ಡಬಳ್ಳಾಪುರ,ಫೆಬ್ರವರಿ,17,2023(www.justkannada.in):  ಕ್ರಿಕೆಟ್  ಟೂರ್ನಿಮೆಂಟ್ ವೇಳೆ  ಗಲಾಟೆ ನಡೆದು ದುಷ್ಮರ್ಮಿಗಳು ಇಬ್ಬರನ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ  ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ನಡೆದಿದೆ.

ಭರತ್, ಪ್ರತೀಕ್ ಕೊಲೆಯಾದ ಯುವಕರು.  ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಧೀರಜ್​ ಅವರು ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದರು.  ಈ ವೇಳೆ ಮೈದಾನದಲ್ಲಿ ಕಾರು ನಿಲ್ಲಿಸಿದ್ದನ್ನು ಭರತ್ ಹಾಗೂ ಪ್ರತೀಕ್ ಪ್ರಶ್ನಿಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಗ್ರಾಮಸ್ಥರು, ಇತರೆ ಆಟಗಾರರು ಜಗಳ ಬಿಡಿಸಿ ಕಳುಹಿಸಿದ್ದರು.

ಆದರೆ ಭರತ್, ಪ್ರತೀಕ್ ಬಸ್​ ಸ್ಟ್ಯಾಂಡ್​ಗೆ ಬಂದ ಸಮಯದಲ್ಲಿ ದುಷ್ಕರ್ಮಿಗಳು ಅಟ್ಟಾಡಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ, ಪರಿಶೀಲನೆ ನಡೆಸಿದ್ದು, ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: cricket –tournament-stabbing-murder-two