18 ವರ್ಷ ಪೂರೈಸಿದ ಯುವ ಮತದಾರರು ನೋಂದಾಯಿಸಿಕೊಳ್ಳಿ- ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ಸೂಚನೆ..

ಮೈಸೂರು, ಆಗಸ್ಟ್, 25, 2020(www.justkannada.in): ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನವರಿ 1, 2021ಕ್ಕೆ ಅನ್ವಯವಾಗುವಂತೆ 18 ವರ್ಷಗಳನ್ನು ಪೂರೈಸಿದ ಯುವ ಹಾಗೂ ಭವಿಷ್ಯದ ಮತದಾರರು ಪೂರಕ ದಾಖಲೆಗಳನ್ನು ಹತ್ತಿರದ ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಒ) ಮೂಲಕ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.Register- young voters- Mysore –DC- Abhiram Jee Shankar -instruction

ಮತದಾರರ ಪಟ್ಟಿಯ ಹೆಸರು ನೋಂದಾವಣಿ, ತಿದ್ದುಪಡಿ, ಮತ್ತು  ತೆಗೆದು ಹಾಕಲು ಅಕ್ಟೋಬರ್ 31 ರವರೆಗೆ ಅವಕಾಶ ನೀಡಲಾಗಿದೆ. ನವೆಂಬರ್ 16 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 16 ರಿಂದ ಡಿಸೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ.

ಮತದಾರರು NVSP portal  ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು (Common Service Centers) ಗಳಲ್ಲಿ ಮತ್ತು BLO ಇಂದ ERO  ವರೆವಿಗೆ ಯಾವುದಾದರೂ ಚುನಾವಣಾ ಅಧಿಕಾರಿ / ನೌಕರರಿಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು.

ವಿಳಾಸ ಬದಲಾವಣೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ನಮೂನೆ-8 ಹಾಗೂ ನಮೂನೆ-8ಎ (ವಿಧಾನಸಭಾ ಕ್ಷೇತ್ರದೊಳಗೆ) ರಲ್ಲಿ ಅರ್ಜಿಯನ್ನು (ಅರ್ಜಿಯನ್ನು ಮತದಾರರಿಂದ ಪಡೆದು) ದಾಖಲಿಸಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿರುತ್ತದೆ.

ಮೃತ ಸ್ಥಳಾಂತರಗೊಂಡ ಮತದಾರರು ಕಂಡು ಬಂದಲ್ಲಿ ನಮೂನೆ-7 ರಲ್ಲಿ ಅರ್ಜಿಯನ್ನು (ಸ್ವಯಂ ಸ್ಥಳಾಂತರಗೊಂಡ ಮತದಾರರ ಕುಟುಂಬದ ಸದಸ್ಯರಿಂದ  ಹತ್ತಿರದ ಸಂಬಂಧಿಕರಿಂದ ಅರ್ಜಿಯನ್ನು ಪಡೆದು) ದಾಖಲಿಸಿ ಮತದಾರರ ಪಟ್ಟಿಯಿಂದ ಕೈ ಬಿಡಬಹುದಾಗಿರುತ್ತದೆ.Register- young voters- Mysore –DC- Abhiram Jee Shankar -instruction

ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು ಹಾಗೂ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು ಉಪ ವಿಭಾಗಾಧಿಕಾರಿಗಳು, ಹುಣಸೂರು ಕಚೇರಿ ಸಂಖ್ಯೆ 08222-252073 ಅಥವಾ ಆಯಾ ತಾಲ್ಲೂಕಿನ ತಹಶೀಲಾರ್ ಕಚೇರಿ ಭೇಟಿ ಮಾಡುವುದು.

ನಂಜನಗೂಡು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರು ಉಪ ವಿಭಾಗಾಧಿಕಾರಿಗಳು, ಮೈಸೂರು ಉಪವಿಭಾಗ, ಜಿಲ್ಲಾಧಿಕಾರಿಗಳ ಕಚೇರಿ, ಮೈಸೂರು. ಕಚೇರಿ ಸಂಖ್ಯೆ 0821-2422100 ಅನ್ನ ಸಂಪರ್ಕಿಸುವುದು ಅಥವಾ ಆಯಾ ತಾಲ್ಲೂಕು ಕಚೇರಿಗೆ ಭೇಟಿ ನೀಡುವುದು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತದಾರರು ಉಪ ಆಯುಕ್ತರು, ಕಂದಾಯ, ಮೈಸೂರು ಮಹಾನಗರ ಪಾಲಿಕೆಯ ದೂರವಾಣಿ ಸಂಖ್ಯೆ 0821-2424070 ಅನ್ನು ಸಂಪರ್ಕಿಸುವುದು, ಚಾಮರಾಜ ವಿಧಾನಸಭಾ ಕ್ಷೇತ್ರದ ಮತದಾರರು ಉಪ ಆಯುಕ್ತರು, ಆಡಳಿತ, ಮೈಸೂರು ಮಹಾನಗರ ಪಾಲಿಕೆ, 0821-2418840 ಅನ್ನು ಸಂಪರ್ಕಿಸುವುದು ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತದಾರರು ಕೌನ್ಸಿಲ್ ಸೆಕ್ರೆಟರಿ, ಮೈಸೂರು ಮಹಾನಗರ ಪಾಲಿಕೆ, 0821-2418819 ಅನ್ನು ಸಂಪರ್ಕಿಸುವುದು.

ವರುಣ ವಿಧಾನಸಭಾ ಕ್ಷೇತ್ರದ ಮತದಾರು ನಂಜನಗೂಡು ತಾಲ್ಲೂಕು ತಹಶೀಲ್ದಾರ್ ಕಚೇರಿ 08221-226252 ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಮತದಾರರು ಟಿ.ನರಸೀಪುರ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ದೂರವಾಣಿ ಸಂಖ್ಯೆ 08227-261233 ಅನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Register- young voters- Mysore –DC- Abhiram Jee Shankar -instruction