ಕ್ರಿಕೆಟ್: 2027ರವರೆಗಿನ ಸರಣಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ಐಸಿಸಿ

ಬೆಂಗಳೂರು, ಆಗಸ್ಟ್ 18, 2022 (www.justkannada.in): ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2027ರವರೆಗಿನ ಪುರುಷರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಟೀಂ ಇಂಡಿಯಾಗೆ ಬಿಡುವಿಲ್ಲದ ವೇಳಾಪಟ್ಟಿ ಇದಾಗಿದೆ.

ಒಟ್ಟು 5 ವರ್ಷಗಳ ಅಂದರೆ ಮುಂಬರುವ 2027ರ ವರೆಗಿನ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನು ಇಂದು ಐಸಿಸಿ ಬಿಡುಗಡೆ ಮಾಡಿದೆ.

ನೂತನ ವೇಳಾಪಟ್ಟಿಯ ಭಾಗವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಸಹ ಘೋಷಣೆಯಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಪಂದ್ಯವೂ ಒಳಗೊಂಡಿದೆ. ಉಳಿದಂತೆ ಒಟ್ಟು 5 ವರ್ಷದಲ್ಲಿ ಅಂದರೆ 2023ರಿಂದ 2027ರ ವರೆಗೆ ಒಟ್ಟು 12 ದೇಶಗಳ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗಲಿದೆ.

ಒಟ್ಟು ಪಂದ್ಯಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, ಬರೋಬ್ಬರಿ 777 ಅಂತರಾಷ್ಟ್ರೀಯ ಪಂದ್ಯಗಳು ಐಸಿಸಿ ನೇತೃತ್ವದಲ್ಲಿ ನಡೆಯಲಿದೆ.