ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕದ್ದು ಬಿಜೆಪಿ ನಾಯಕರಿಗೆ ಸೇರಬೇಕಾದ ಹಣ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ.

ಮೈಸೂರು, ಅಕ್ಟೋಬರ್,14,2023(www.justkannada.in):  ಐಟಿ ದಾಳಿ ವೇಳೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಅದು ಬಿಜೆಪಿ  ನಾಯಕರಿಗೆ ಸೇರಬೇಕಾದ ಹಣ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಸಿಸಿಸಿ ವಕ್ತಾರ ಎಂ.ಲಕ್ಷ್ಮಣ್ , ಚುನಾವಣೆ ಸಮಯದಲ್ಲಿ ಐಟಿ ರೈಡ್ ಆಗುವುದು ಸಾಮಾನ್ಯ. ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರೂ. ಹಣ ಪತ್ತೆಯಾಗಿದೆ. ಅದನ್ನು ನೀವು ಆಗಲೇ ನೋಡಿದ್ದೀರಿ. ಐಟಿ ಅಧಿಕಾರಿಗಳಿಗೆ ನನ್ನ ಪ್ರಶ್ನೆ,  ನಾಲ್ಕು ಗಂಟೆ ಹಿಂದೆ ಆ ಹಣ ಎಲ್ಲಿತ್ತು.? ಯಾವ ಪಕ್ಷದವರು ಕೊಟ್ಟರು ಯಾರಿಗಾಗಿ ಇಟ್ಟುಕೊಂಡಿದ್ದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಅದು ಬಿಜೆಪಿ  ನಾಯಕರಿಗೆ ಸೇರಬೇಕಾದ ಹಣ. ಆ ಹಣದ ಮೂಲ ಯಾವುದು ಅದನ್ನು ದಯಮಾಡಿ ತಿಳಿಸಿ ಕೊಡಬೇಕು. ಆ ಹಣದ ವಿಚಾರದಲ್ಲಿ ಇಲ್ಲ ಸಲ್ಲದ ಅಪವಾದ ಹೇರುತ್ತಿದ್ದಾರೆ. ಇದು ದೊಡ್ಡ ಸುಳ್ಳು ನನ್ನ ಪ್ರಕಾರ ಅಲ್ಲಿ ಸಿಕ್ಕಿರುವುದು 42 ಕೋಟಿ ಹಣ ಅಲ್ಲ. ಮೋರ್ ದೆನ್ 200 ಕೋಟಿ ಹಣ ಸಿಕ್ಕ ಮಾಹಿತಿ ನಮಗಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ  27 ಸೆಂಟರ್ ಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ವಿದ್ಯುತ್ತನ್ನು ಡಬಲ್ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಎಂದು ಕಂಪ್ಲೆಂಟ್ ಇದೆ . ಈ ಹಿಂದೆ ಸುನೀಲ್ ಕುಮಾರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ ಇವರೆಲ್ಲಾ ಪವರ್ ಮಿನಿಸ್ಟರ್ ಆಗಿದ್ದಾಗ ಕೋಟಿ ಕೋಟಿ ಹಣ ಕಮಿಷನ್ ಪಡೆದಿದ್ದಾರೆ . ಈಗ ವಿದ್ಯುತ್ ಬೇಡಿಕೆ ಹೆಚ್ಚಾಗಲು ಗೃಹ ಜ್ಯೋತಿ ಮತ್ತು ಈಗಿನ ಸಂದರ್ಭವೇ ಕಾರಣ. ನಮಗೆ 7000 ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಬೇಕು ಹಾಗಾಗಿ ಹಣ ಕೊಟ್ಟು ಖರೀದಿಸಲಾಗುತ್ತದೆ. ಇಲ್ಲಿ ಯಾರೂ ಕದಿಯುತ್ತಿಲ್ಲ ನ್ಯಾಯವಾಗಿ ಖರೀದಿಸಲಾಗುತ್ತದೆ. ಇದೆ ಬಿಜೆಪಿ ಸರ್ಕಾರದಲ್ಲಿ ಈ ರೀತಿ ಆಗಿದ್ದರೆ ಹಬ್ಬ ಮಾಡ್ಕೊತಿದ್ರು. ಬಿಜೆಪಿ ಜೆಡಿಎಸ್ ನಿಮ್ಮ ಯೋಗ್ಯತೆಗೆ ಒಂದು ಬಾರಿ ಕೂಡ ವಿದ್ಯುತ್ ಯೂನಿಟ್ ಹೆಚ್ಚು ಮಾಡಿಲ್ಲ. 1 ವರ್ಷಕ್ಕೆ ಈ ಕೆಲಸಕ್ಕೆ 5000 ಸಾವಿರ ಕೋಟಿ ರೂಗಳು ಬೇಕು ಸಿದ್ದರಾಮಯ್ಯ ಇಷ್ಟು ಅತ್ಯುತ್ತಮ ಫೈನಾನ್ಸ್ ನೀಡಿದ್ದಾರೆ.ಇಂತಹ ಕೆಲಸವನ್ನು ಮೆಚ್ಚುಗೆ ವ್ಯಕ್ತಪಡಿಸದೆ ಕಿಡಿ ಕಾರುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪ್ರತಾಪ್ ಸಿಂಹ ಒಬ್ಬ ಮಹಿಳಾ ವಿರೋಧಿ.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಸಂಸದ ಪ್ರತಾಪ್ ಸಿಂಹ ಒಬ್ಬ ಮಹಿಳಾ ವಿರೋಧಿ. ಈ ಹಿಂದೆ ಎರಡು ಐಎಎಸ್ ಅಧಿಕಾರಿಗಳ ನಡುವೆ ಜಗಳ ತಂದಿಟ್ಟರು. ಸಂಸದ ಸುಮಲತಾ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದರು.  ಬಸ್ ಸ್ಟ್ಯಾಂಡ್ ಮೇಲೆ ಗುಂಬಜ್ ಆಕಾರ ಇದೇ ಅಂತ  ರಾಮದಾಸ್ ಮೇಲೆ ಗೂಬೆ ಕೂರಿಸಿದರು.  ಅವರನ್ನು ಮೂಲೆ ಗುಂಪು ಮಾಡಿದ್ರು ಮಹಿಷ ದಸರಾ ವಿರೋಧಿಸಿ ಅದನ್ನು ಅದ್ದೂರಿಯಾಗಿ ಮಾಡಲು ಸಹಕರಿಸಿದರು. ಬರೀ ಕಿಡಿ ಹತ್ತಿಸುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾರೆ  ಅದನ್ನು ಬಿಟ್ಟು ಅವರ ಕೊಡುಗೆ ಮೈಸೂರಿಗೆ ಏನು ಇಲ್ಲ ಎಂದು ಕಿಡಿಕಾರಿದರು.

Key words: contractor -Ambikapati – money -due – BJP leaders-KPCC spokesperson- M. Laxman