ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಲಿ- ಬಿ.ಕೆ ಹರಿಪ್ರಸಾದ್ .

ಬೆಂಗಳೂರು,ಜನವರಿ,3,2024(www.justkannada.in): ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು. ಹೀಗಾಗಿ ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಲಿ ಎಂದು ಎಂಎಲ್ ಸಿ  ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್,  ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು.  ನಮಗೆ ಮಾಹಿತಿ ಸಿಗ್ತಿದೆ. ಮಾಹಿತಿ ಇದ್ದೇ ಹೇಳುತ್ತಿದ್ದೇನೆ ಎಂದಿದ್ದಾರೆ.

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮವಲ್ಲ. ಅದು ರಾಜಕೀಯ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮ ಆಗಿದ್ರೆ ನಾವೆಲ್ಲವರೂ ಹೋಗುತ್ತಿದ್ದವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೇ ಧಾರ್ಮಿಕ ಮುಖಂಡರು ಹೋಗಬೇಕಿತ್ತು.  ಮೋದಿ, ಅಮಿತ್ ಶಾ ಧರ್ಮ ಯಾವುದು ಅಂತಾ ಗೊತ್ತಾಗಿಲ್ಲ ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು.

Key words: Godhra -tragedy -:Govt – protect -going -Ayodhya – BK Hariprasad.