ಸಿದ್ಧೇಶ್ವರ ಶ್ರೀಗಳು ವ್ಯಕ್ತಿಯಲ್ಲ ಅವರೊಬ್ಬರು ದೈವಿಕ ಶಕ್ತಿ- ಸಚಿವ ಸುಧಾಕರ್ ಸಂತಾಪ.

ಚಿಕ್ಕಬಳ್ಳಾಪುರ,ಜನವರಿ,3,2023(www.justkannada.in):  ದೇಶದಲ್ಲಿ ಸಾಕಷ್ಟು ಸಾಧು ಸಂತರು ಸ್ವಾಮೀಜಿಗಳನ್ನ ನೋಡಿದ್ದೇವೆ. ಆದರೆ ಸಿದ್ಧೇಶ್ವರ ಸ್ವಾಮೀಜಿಯಂತವರು  ತುಂಬಾ ವಿರಳ.  ಸಿದ್ದೇಶ್ವರ ಶ್ರೀಗಳು  ವ್ಯಕ್ತಿಯಲ್ಲ ಅವರೊಬ್ಬರು ದೈವಿಕ ಶಕ್ತಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್,  ಕಾಯಿಲೆ ಗುಣಪಡಿಸುವ ಶಕ್ತಿ ದೇಹದಲ್ಲಿ ಇದೆ. ನೋವು ಇಲ್ಲದ ಔಷಧಿಯನ್ನ ಮಾತ್ರ ನೀಡುವಂತೆ ಸೂಚಿಸಿದ್ದರು. ಸಂತಸದಿಂದ ದೇವರ ಬಳಿ ಹೋಗುತ್ತಿದ್ದೇನೆ ಎಂದಿದ್ದರು. ಅವರು ದೈಹಿಕವಾಗಿ ಇಲ್ಲದಿದ್ದರೂ ನಮ್ಮೆಲ್ಲರ ಮೇಲೆ  ಆಶೀರ್ವಾದ ಇದೆ. ಶ್ರೀಗಳ ಭಕ್ತರಿಗೆ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹ  ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿಗಳು ಅಪಾರ ಭಕ್ತ ಸಮೂಹ ಹೊಂದಿದ್ದರು. ತಮ್ಮ ಪ್ರವಚನಗಳ ಮೂಲಕ ಜೀವನ ಪಾಠ ಹೇಳುತ್ತಿದ್ದರು. ರಾಜ್ಯಕ್ಕೆಷ್ಟೇ ಅಲ್ಲದೇ ಇಡೀ ದೇಶಕ್ಕೆ ಮಾದರಿಯಾಗಿದ್ದರು.  ಶ್ರೀಗಳ ನಿಧನ  ಭಕ್ತರಿಗೆ ತುಂಬಲಾರದ ನೋವಾಗಿದೆ ಎಂದಿದ್ದಾರೆ.

Key words: Siddheshwara shri -divine power-Minister -Sudhakar.