ಸಂಜೆ 5.15ಕ್ಕೆ ಸಿದ್ಧೇಶ್ವರ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ: ನಂತರವೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ.

ವಿಜಯಪುರ,ಜನವರಿ,3,2023(www.justkannada.in):  ಸಿದ್ಧೇಶ್ವರ ಶ್ರೀಗಳಿಗೆ ಸಂಜೆ 5.15ಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸುತ್ತೇವೆ. ನಂತರವೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಸಂಜೆ 5.15ಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸುತ್ತೇವೆ. ನಂತರವೂ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ . ಭಕ್ತರು ಶಾಂತಿಯುತವಗಿ  ಅಂತಿಮ ದರ್ಶನ ಪಡೆಯಬೇಕು.

ಜ್ಞಾನಯೋಗಾಶ್ರಮದಲ್ಲಿ ಅಂತಿಮ ದರ್ಶನಕ್ಕೆ ಅವಕಶ ಇಲ್ಲ. ಹೀಗಾಗಿ ಸೈನಿಕ ಶಾಲೆ ಮೈದಾನದಲ್ಲೇ ಅವಕಾಶವಿದೆ. ಅಂತಿಮ ದರ್ಶನ ಪಡೆಯಲು ಹೆಚ್ಚಿನ ಸಮಯಾವಕಾಶ ನೀಡುತ್ತೇವೆ. ಹೆಚ್ಚುವರಿಯಾಗಿ 2 ಮೂರು ಗಂಟೆ ದರ್ಶನಕ್ಕೆ ಕಾಲಾವಕಾಶ ನೀಡುತ್ತೇವೆ. ವಿಜಯಪುರ ಜಿಲ್ಲಾಡಳಿತಕ್ಕೆ ಭಕ್ತರು ಸಹಕರಿಸಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

Key words:  government- honors – Siddheshwar Shri- final darshan – CM Bommai.