ಭರ್ಜರಿ ಗಳಿಕೆ ಕಂಡ ಭಟ್ಟರ ಗಾಳಿಪಟ-2

ಬೆಂಗಳೂರು, ಆಗಸ್ಟ್ 18, 2022 (www.justkannada.in): ಯೋಗರಾಜ ಭಟ್ಟರ ಗಾಳಿಪಟ-2 ಭರ್ಜರಿ ಗಳಿಕೆ ಕಂಡಿದೆ.

ಹೌದು. ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ ‘ಗಾಳಿಪಟ’-2 ಪ್ರದರ್ಶನ ಕಂಡಿತ್ತು.

ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಾಟ ಎರಡನೇ ದಿನವೂ 10 ಕೋಟಿ ಕಲೆಕ್ಷನ್​ ಮಾಡಿದೆ.

ಮೂರನೇ ದಿನ 5 ಕೋಟಿ ಕಲೆಕ್ಷನ್​ ಆಗಿದ್ದು 4ನೇ ದಿನ 5 ಕೋಟಿ ಕಲೆಕ್ಷನ್ ಆಗಿದೆ. 5ನೇ ದಿನ 2 ಕೋಟಿ ದಾಟಿದ್ದು, ಒಟ್ಟು ಚಿತ್ರದ ಕಲೆಕ್ಷನ್​ 37 ಕೋಟಿ ದಾಟಿದೆ ಎಂದು ಮೂಲಗಳು ತಿಳಿಸಿದೆ.

ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಭಾರೀ ಓಪನಿಂಗ್ ಎನ್ನಬಹುದಾಗಿದೆ. ಗಾಳಿಪಟ 2 ಚಿತ್ರ ಭರ್ಜರಿ ಓಪನ್ನಿಂಗ್ ಪಡೆದಿದ್ದು, ಸಿನಿಮಾ ತಂಡ ಫುಲ್​ ಆಗಿದೆ.