ಕಾಂಗ್ರೆಸ್ ಜತೆ ಕೆಪಿಜೆಪಿ ಪಕ್ಷ ವಿಲೀನಗೊಳಿಸಿದ ಆರ್.ಶಂಕರ್..

ಬೆಂಗಳೂರು,ಜೂ,14,2019(www.justkannada.in): ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಆರ್ ಶಂಕರ್, ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ನಡುವೆ  ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆಗೆ ವಿಲೀನಗೊಳಿಸಿದ್ದಾರೆ.

ಇಂದು ಎರಡನೇ ಬಾರಿಗೆ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೊಂಡಿದ್ದು. ರಾಣಿಬೆನ್ನೂರಿನಿಂದ ಕೆಪಿಜೆಪಿ ಪಕ್ಷದಿಂದ ಗೆದ್ದಿದ್ದ ಏಕೈಕ ಶಾಸಕ ಆರ್ ಶಂಕರ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಆರ್.ಶಂಕರ್ ಭೇಟಿ ನೀಡಿದ್ದರು.  ಈ ವೇಳೆ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆಗೆ ಸೇರ್ಪಡೆ ಮಾಡುತ್ತಿರುವ ಪತ್ರವನ್ನು ನೀಡಿದರು. ಹೀಗೆ ಕಾಂಗ್ರೆಸ್ ಜೊತೆಗೆ ಕೆಪಿಜೆಪಿ ಪಕ್ಷವನ್ನು ವಿಲೀನಗೊಳಿಸಿದ ಆರ್ ಶಂಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಿದ್ದರಾಮಯ್ಯ, ಶುಭಕೋರಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಆರ್. ಶಂಕರ್ ಗೆ ಸಚಿವ ಸ್ಥಾನ ನೀಡಲಾಗಿತ್ತು. ಅಂದು ಕಾಂಗ್ರೆಸ್ ಕೋಟಾದಲ್ಲೇ ಪಕ್ಷೇತರ ಶಾಸಕರಾಗಿಯೇ ಸಚಿವ ಸ್ಥಾನ ಪಡೆದಿದ್ದರು. ಬಳಿಕ ಮೊದಲ ಬಾರಿಗೆ ಸಂಪುಟ ವಿಸ್ತರಣೆಯಾದಾಗ ಆರ್.ಶಂಕರ್ ಅವರನ್ನ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಇದಾದ ನಂತರ ಬಿಜೆಪಿಗೆ ಬೆಂಬಲ ನೀಡುವುದಾಗಿ ಆರ್. ಶಂಕರ್ ರನ್ನ ಘೋಷಿಸಿತ್ತು. ಈ ನಡುವೆ ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ಇದೀಗ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಲಾಗಿದೆ.

ಇದೀಗ ಆರ್. ಶಂಕರ್ ಕೆಪಿಜೆಪಿ ಪಕ್ಷವನ್ನ ಕಾಂಗ್ರೆಸ್ ಗೆ ವಿಲೀನಗೊಳಿಸಿದ್ದಾರೆ.

Key words: R. Shankar -merged -KPJP –with- Congress.