ಕಮಿಷನ್ ಸಿಕ್ಕರೇ ವಿಧಾನಸೌಧವನ್ನೇ ಮಾರಿಬಿಡ್ತಾರೆ- ಕೆ.ಎಸ್ ಈಶ್ವರಪ್ಪ ಕಿಡಿ…

ಬೆಂಗಳೂರು,ಜೂ,14,2019(www.justkannada.in): ಈ ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮೀಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ ಎಂದು ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಸಮ್ಮಿಶ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಕೆ.ಎಸ್ ಈಶ್ವರಪ್ಪ, ಸರ್ಕಾರ ಜಿಂದಾಲ್ ಗೆ ಭೂಮಿ‌  ಪರಭಾರೆ ನಿರ್ಧಾರ ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲಲ್ಲ ಎಂದರು .

ಹೂಡಿಕೆದಾರರಿಗೆ ಐಎಂಎ ವಂಚನೆ ಪ್ರಕರಣ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ,  ಜಮೀರ್ ಮತ್ತು ರೋಷನ್ ಬೇಗ್ ರನ್ನು ಬಂಧಿಸಬೇಕು. ಜಮೀರ್ ಮತ್ತು ರೋಷನ್ ಬೇಗ್ ಇಬ್ಬರೂ ಮೈತ್ರಿ ಪಕ್ಷದ ಕಳ್ಳೆತ್ತುಗಳು. ಈ ಪ್ರಕರಣ ಸಿಬಿಐಗೆ ಕೊಡಲಿ. ಜಮೀರ್ ಮತ್ತು ರೋಷನ್ ಬೇಗ್ ನ ಲಾಕಪ್ ಗೆ ಹಾಕಿ ಕ್ರಿಮಿನಲ್ ಗಳನ್ನು ಬೆಂಡೆತ್ತುವಂತೆ ಬೆಂಡತ್ತಿದ್ರೆ ಸತ್ಯ ತಾನಾಗೇ ಹೊರಗೆ ಬರುತ್ತದೆ  ಎಂದು ಹರಿಹಾಯ್ದರು.

ಒಂದು ವಾರದಲ್ಲಿ ಸಮ್ಮಿಶ್ರ ಸರ್ಕಾರ ಬೀಳುತ್ತದೆ. ಈ ಸರ್ಕಾರದಲ್ಲಿ ಪಕ್ಷೇತರರು ಹೆಚ್ಚು ದಿನಗಳಕಾಲ ಸಚಿವರಾಗಿ ಇರಲ್ಲ. ಪಕ್ಷೇತರರಿಗೆ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಯಾವುದೇ ಬೇಧವಿಲ್ಲ. ಅವರು ಅಧಿಕಾರವಿರುವವರ ಕಡೆ ಹೋಗ್ತಾರೆ ಎಂದರು.

Key words: commission -sells –vidanasoudha- KS Eshwarappa -bangalore