ಸಿಇಟಿ ಪರೀಕ್ಷೆಯಂದೇ ಪದಗ್ರಹಣ ಕಾರ್ಯಕ್ರಮ:  ಪ್ರಧಾನಿ ಮೋದಿ ರೋಡ್ ಶೋ ಟೀಕಿಸಿದ್ದ ಸಿದ್ಧರಾಮಯ್ಯಗೆ ಬಿ.ಎಲ್ ಸಂತೋಷ್ ಟಾಂಗ್.

ಬೆಂಗಳೂರು,ಮೇ,19,2023(www.justkannada.in):  ನೀಟ್ ಪರೀಕ್ಷೆ ವೇಳೆ ರೋಡ್ ಶೋ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನ ಟೀಕಿಸಿದ್ದ ಸಿದ್ಧರಾಮಯ್ಯ ಅವರಿಗೆ ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಎಲ್ ಸಂತೋಷ್, ‘ನಮ್ಮ ನಿಯೋಜಿತ ಸಿಎಂ ಟ್ವೀಟ್ ಮಾಡಿ ತುಂಬಾ ದಿನಗಳು ಕಳೆದಿಲ್ಲ. ನಾಳೆ ರಾಜ್ಯಾದ್ಯಂತ ಮತ್ತು ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಪ್ರಮಾಣ ವಚನ ಒಂದು ಅಥವಾ ಎರಡು ದಿನಗಳ ಕಾಲ ತಡೆದಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿರಲಿಲ್ಲ’ ಎಂದು ಚಾಟಿ ಬೀಸಿದ್ದಾರೆ.

Key words: CET exam – BL Santosh -Tong -Siddaramaiah