ಪ್ರತಿಭಟನೆಗೆ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ.

Promotion

ಬೆಂಗಳೂರು,ಫೆಬ್ರವರಿ,23,2023(www.justkannada.in):  ಪ್ರತಿಭಟನೆಗೆ ಬಂದಿದ್ದ ಶಿಕ್ಷಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಂಕರಪ್ಪ ಬೋರಡ್ಡಿ(47) ಮೃತಪಟ್ಟ ಶಿಕ್ಷಕ. ಶಂಕರಪ್ಪ ಬೋರಡ್ಡಿ ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಶಿಕ್ಷಕ ಎನ್ನಲಾಗಿದೆ. ಪಿಂಚಣಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಅನುದಾನಿತ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಮಧ್ಯೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಂಕರಪ್ಪ ಬೋರಡ್ಡಿ ರಾತ್ರಿ ವೇಳೆ ರೈಲ್ವೆ ನಿಲ್ದಾಣಕ್ಕೆ ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಶಂಕರಪ್ಪ ಬೋರಡ್ಡಿ ಶವ ಪತ್ತೆಯಾಗಿದ್ದು, ಶಾಲಾ ಶಿಕ್ಷಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Key words: protesting –teacher- committed- suicide-bangalore