ಕೋವಿಡ್ ಸಮಯದಲ್ಲಿ ಭಿಕ್ಷೆ ಎತ್ತಿದ್ದ ಹಣ ಎಲ್ಲಿ ಹೋಯಿತು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು.

Promotion

ಬೆಂಗಳೂರು,ಜುಲೈ,9,2022(www.justkannada.in):  ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಭಿಕ್ಷೆ ಎತ್ತಿದ್ದ ಹಣ ಎಲ್ಲಿ ಹೋಯಿತು ಎಂದು ಹೇಳಿಕೆ ನೀಡಿದ್ಧ   ಸಿಎಂ ಬಸವರಾಜ ಬೊಮ್ಮಾಯಿಗೆ  ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೋವಿಡ್ ಸಂದರ್ಭದಲ್ಲಿ ಬಿಜೆಪಿಯವರು ಮಾಡಿದ್ದೇನು ಎಂಬುದು ಗೊತ್ತಿದೆ.   ಕೋವಿಡ ಸಮಯದಲ್ಲಿ ಕಾರ್ಮಿಕರು, ಬಡವರು ಅವರವರ ಊರಿಗೆ ಹೋಗಬೇಕು ಅಂದರೆ ಇವರು ಬಸ್ ದರ ಏರಿಸಿದರು. ಇಲ್ಲಿಂದ ಹೋಗಿ ಬಸ್ ವಾಪಸ್ ಬರುತ್ತೆ ಅಂತ ಅದಕ್ಕೂ ಚಾರ್ಜ್ ಮಾಡಿದರು. ಮರೆತು ಹೋಗಿದ್ದಾರಾ ಸಿಎಂ..? ಎಂದು ಟಾಂಗ್ ನೀಡಿದರು.

ಆ ವೇಳೆ ನಾವು ಎಲ್ಲರೂ ಹೋಗಿ ಹಣ ಸಂಗ್ರಹ ಮಾಡಿ, ಒಂದು ಕೋಟಿ ರೂ ಕೆಎಸ್‌ಆರ್ ಟಿಸಿಗೆ ಕೊಡುವುದಕ್ಕೆ ಹೋದ ವೇಳೆ ಸರ್ಕಾರದಿಂದ ಉಚಿತ ವಾಗಿ ಕರೆದುಯ್ಯುವುದಾಗಿ ಹೇಳಿದರು. ನಾವು ಅಲ್ಲಿಗೆ ಹೋಗಿ ಒಂದು ಕೋಟಿ ರೂ. ಚೆಕ್ ನಿಮ್ಮ ಮುಖಕ್ಕೆ ಎಸೆದ ಮೇಲೆ ನೀವು ಉಚಿತವಾಗಿ ಕರೆದುಕೊಂಡು ಹೋಗಲು ಮುಂದಾದ್ರಿ ಎಂದು ವಾಗ್ದಾಳಿ ನಡೆಸಿದರು.

ಪಿಎಸ್ ಐ ಹಗರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನ್ಯಾಯಾಂಗ ತನಿಖೆ ಕೊಡಲು ಸರ್ಕಾರ  ಹೆದರೋದ್ಯಾಕೆ..? ನಿಮ್ಮ ಹೆಸರೂ ಬರುತ್ತೆ ಅಂತಾ ಭಯನಾ..? ಹಗರಣ ಆಗಿಲ್ಲ ಅಂತಾ ಗೃಹಸಚಿವರು ಹೇಳಿದ್ರು. ಉನ್ನತ ಅಧೀಕಾರಿಗಳಿಂದ ತನಿಖೆ ಅಂದ್ರು. ಇದೀಘ ನೇಮಕಾತಿ ಅಕ್ರಮದಲ್ಲಿ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.

ಪಠ್ಯ ಪುಸ್ತಕ ಸಾಕ್ಸ್ ವಿತರಣೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಇತಿಹಾಸ ತಿರುಚಿರುವರಿಗೆ ಮಹನೀಯರಿಗೆ ಅವಮಾನ ಮಾಡಿದವರಿಗೆ 150 ಕೋಟಿ ಖರ್ಚು ಮಾಡಲು ತಯಾರಿ ಇದ್ದೀರಿ. ಮಕ್ಕಳಿಗೆ ಶೂ ಬಾಕ್ಸ್ ,ಸಾಕ್ಸ್ ಕೋಡುವುದಕ್ಕೆ 132 ಕೋಟಿ ಇಲ್ಲವೇ? ಚಕ್ರತೀರ್ಥ ಮೇಲೆ ಇರುವ ಪ್ರೀತಿ ಶಾಲೆ ಮಕ್ಕಳ ಮೇಲೆ ಯಾಕೆ ಇಲ್ಲ?  ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ? ದಯವಿಟ್ಟು ಬಿಡುಗಡೆ ಮಾಡಲಿರುವ 132 ಕೋಟಿ ಹಣದಲ್ಲಿ 40% ಕಮಿಷನ್ ಹೊಡೆಯಬೇಡಿ ಎಂದು ಟಾಂಗ್ ನೀಡಿದರು.

Key words: Priyank Kharge- CM Bommai- statement