Sunday, August 23, 2026

BDA Apartments

Home Front Page ಶಾಲಾ ಮಕ್ಕಳಿಗೆ ಕೂಡಲೇ ಸಮವಸ್ತ್ರ, ಶೂ ವಿತರಣೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ.

ಶಾಲಾ ಮಕ್ಕಳಿಗೆ ಕೂಡಲೇ ಸಮವಸ್ತ್ರ, ಶೂ ವಿತರಣೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ.

ಬೆಂಗಳೂರು,ಜುಲೈ,9,2022(www.justkannada.in): ಶಾಲಾ ಮಕ್ಕಳಿಗೆ ಕೂಡಲೇ ಸಮವಸ್ತ್ರ, ಶೂ ವಿತರಣೆ ಮಾಡುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ,  ಮಕ್ಕಳಿಗೆ ಶೂ, ಸಾಕ್ಸ್ ಕೊಟ್ಟಿದ್ದು ನಾವು. ಬಡಮಕ್ಕಳಿಗೆ ಅನುಕೂಲ ಆಗಲಿ ಅಂತಾ ಕೊಟ್ಟವು. ಆದರೆ ಬಿಜೆಪಿಯವರು ಅದನ್ನ ನಿಲ್ಲಿಸಿದರು. ಈಗ ಒತ್ತಾಯದ ಮೇಲೆ ಶೂ ಸಾಕ್ಸ್ ನೀಡಲು  ಮುಂದಾಗಿದ್ದಾರೆ. ಈಗಾಗಲೇ ಶಾಲೆ ಶುರುವಾಗಿದೆ ಆದರೆ ಇನ್ನೂ ಸಮವಸ್ತ್ರ ನೀಡಿಲ್ಲ. ಕೂಡಲೇ ಸಮವಸ್ತ್ರ, ಶೂ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಭೀತಿ ಹಿನ್ನೆಲೆ, ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಇಲ್ಲಿ ಕೇವಲ ಮೀಟಿಂಗ್ ಮಾಡಿದ್ರೆ ಸಾಕಾ. ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪರಿಹಾರ ನೀಡಬೇಕು.  ಪ್ರಧಾನಿ ಮೋದಿ ಸಾವಿರಾರು ಕೋಟಿ ಕೊಟ್ಟೆದ್ದಾರೆ  ಎನ್ನುತ್ತಿದ್ದರಲ್ಲಾ ಅದೇನು ಪರಿಹಾರ ಕೊಟ್ಟಿದ್ದಾರೆ ಹೇಳಿ ಎಂದು ಟಾಂಗ್ ನೀಡಿದರು.

Key words: Former CM –Siddaramaiah-demands- distribution – uniforms -shoes – school children.